BUNTS NEWS, ಬಹರೈನ್: ಬಹರೈನ್ ಬಂಟರ ಸಂಘದ 2018-19ನೇ ಸಾಲಿನ ಕಾರ್ಯಾಕಾರಿ ಸಮಿತಿಯ ಪದಗ್ರಹಣ
ಸಮಾರಂಭವು ಅ.25ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ
ರಾಜ್ಯ ರೆಡ್’ಕ್ರಾಸ್ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಅವು ನೂತನ ಪದಾಧಿಕಾರಿಗಳಿಗೆ ಶುಭ
ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಹರೈನ್ ಬಂಟರ ಸಂಘದ ಅಧ್ಯಕ್ಷ ಪ್ರದೀಪ್ ಆರ್. ಶೆಟ್ಟಿ
ವಹಿಸಿದ್ದರು.
ಸಮಾರಂಭದಲ್ಲಿ ಬಹರೈನ್ ಬಂಟರ ಸಂಘದ ಉಪಾಧ್ಯಕ್ಷ ಸುಕೇಶ
ಶೆಟ್ಟಿ, ಸಂಘದ ಕಾರ್ಯದರ್ಶಿ ಧನಂಜಯ ಶೆಟ್ಟಿ, ಖಜಾಂಚಿ ಅಕ್ಷತ್ ಹೆಗ್ಡೆ, ಸಾರ್ವಜನಿಕ ಸಂಪರ್ಕ
ಅಧಿಕಾರಿ ಸುದೇಶ್ ಶೆಟ್ಟಿ, ಸಹಾಯಕ ಕಾರ್ಯದರ್ಶಿ ರಜತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ
ಅಭಿಜಿತ್ ಶೆಟ್ಟಿ, ಸಾಂಸ್ಕೃತಿಕ ಸಹ ಕಾರ್ಯದರ್ಶಿ ಶರಣ್ ಶೆಟ್ಟಿ ಉಲ್ತುರ್, ಕ್ರೀಡಾ ಕಾರ್ಯದರ್ಶಿ
ಮನೀಷ್ ಸೂಡಾ ಹಾಗೂ ಬಹರೈನ್’ನಲ್ಲಿ ನೆಲೆಸಿರುವ ಬಂಟ ಬಾಂಧವರು ಉಪಸ್ಥಿತರಿದ್ದರು.