ಸಂಭ್ರಮದಲ್ಲಿ ನಡೆದ ಕನ್ನಡಿಗರು ದುಬೈ ‘ಕನ್ನಡ ರಾಜ್ಯೋತ್ಸವ 2018' - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಂಭ್ರಮದಲ್ಲಿ ನಡೆದ ಕನ್ನಡಿಗರು ದುಬೈ ‘ಕನ್ನಡ ರಾಜ್ಯೋತ್ಸವ 2018'

Share This
ದುಬಾಯಿ: ಕನ್ನಡಿಗರು ದುಬೈ ವತಿಯಿಂದ ನ.9ರಂದು ದುಬಾಯಿಯ ಆಲ್ಕೂಝಿನಲ್ಲಿರುವ ಕ್ರೆಡೆನ್ಸ್ ಹೈ ಸ್ಕೂಲ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ 2018 ನಡೆಯಿತು.
ಕನ್ನಡಿಗರು ದುಬೈ ಸಂಘವು ಪ್ರತೀ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ನೀಡುವ ಕನ್ನಡ ರತ್ನ ಪ್ರಶಸ್ತಿಯನ್ನು ಬಾರಿ ಆಳ್ವಾಸ್ ಎಜುಕೇಶನ್ ಸಂಸ್ಥೆಯ ಸ್ಥಾಪಕರಾದ ಡಾ. ಮೋಹನ್ಆಳ್ವ ಅವರಿಗೆ ನೀಡಿ ಗೌರವಿಸಿದರು. ದುಬಾಯಿಯಲ್ಲಿ ಕನ್ನಡ ಸಂಘಗಳಿಗೆ ನೀಡುವ ಸಹಾಯ ಸಹಕಾರ ಪರಿಗಣಿಸಿ ಎಮ್ ಸ್ಕ್ವೇರ್ ಎಂಜಿನೀರಿಂಗ್ ಮಾಲೀಕ ಮುಸ್ತಫಾ ಮತ್ತು ದಂಪತಿಗಳಿಗೆ ಕನ್ನಡ ಕೌಸ್ತುಭ ಪ್ರಶಸ್ತಿಯನ್ನು ನೀಡಲಾಯಿತು.

ಕನ್ನಡ ಚಿತ್ರ ರಂಗದ ಕ್ರೇಝಿ ಸ್ಟಾರ್ ರವಿ ಚಂದ್ರನ್ ಅವರಿಗೆ ಕನ್ನಡ ಕಾಲ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಖ್ಯಾತ ನಿರೂಪಕಿ ಹಾಗೂ ಚಂದನವನದ ತಾರೆ ಅಪರ್ಣ ದಂಪತಿಗಳನ್ನು, ಶ್ರೀ ರವಿಶಂಕರ್ ಗುರೂಜಿ , ಪ್ರಮುಖ ಹಾಸ್ಯ ಕಲಾವಿಧ ನಾಗರಾಜ್ ಕೋಟೆ, ವಿಶೇಷ ಅತಿಥಿಯಾಗಿ ಆಗಮಿಸಿದ ಬುಟ್ಟಿಯಲ್ಲಿ ಕಿತ್ತಳೆ ಮಾರಿ ಬರುವ ಹಣದಿಂದ ಶಾಲೆಯನ್ನು ಕಟ್ಟಿಸಿದ ಅಕ್ಷರ ಸಂತ ಬಿರುದನ್ನು ಪಡೆದಿರುವ ಹರೇಕಲ ಹಾಜಬ್ಬ ಅವರ ಸಮಾಜಮುಖಿ ಕೆಲಸವನ್ನು ಗುರುತಿಸಿ ಗೌರವಿಸಿದರು.

ಈ ಸಂದರ್ಭ ಕನ್ನಡ ಚಲನ ಚಿತ್ರ ಲೋಕದಲ್ಲಿ ಮಿಂಚಿ ಮರೆಯಾದ ಅದ್ಬುತ ಪ್ರತಿಭೆ ದಿವಂಗತ ಶಂಕರ್ ನಾಗ್ ಅವರ ಹುಟ್ಟುಹಬ್ಬವನ್ನ ಸಮಸ್ತ ದುಬಾಯಿ ಕನ್ನಡಿಗರು ಆಚರಿಸಿದ್ದು ವಿಶೇಷವಾಗಿತ್ತು . ಯುಎಇ ದೇಶದ ಕನ್ನಡ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಹಾಸ್ಯ ಕಲಾವಿದರಾದ ನಾಗರಾಜ್ ಕೋಟೆ ಅವರಿಂದ ಹಾಸ್ಯ ಕಾಯಕ್ರಮ ನೆರೆದ ಪ್ರೇಕ್ಷಕರನ್ನು ನಗೆಗಾಡಿನಲ್ಲಿ ತೇಲಿಸಿತು, ಹಲವು ಗಾಯಕರಿಂದ ಕನ್ನಡ ಹಾಡುಗಳು, ನೃತ್ಯ, ಭರತ ನಾಟ್ಯ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳನ್ನು ಯುಎಇ ದೇಶದಲ್ಲಿ ನೆಲಸಿರುವ ಸಾವಿರಾರು ಕನ್ನಡಿಗರು ಆನಂದಿನಿಸಿ ಕನ್ನಡಮ್ಮನ ಹಬ್ಬವನ್ನು ಕಣ್ತುಂಬಿಸಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ವೀರೇಂದ್ರ ಬಾಬು, ಶ್ರೀಮತಿ ಉಮಾ ವಿಧ್ಯಾದರ್, ಮಲ್ಲಿಕಾರ್ಜುನ ಗೌಡ, ಮುಖ್ಯ ನಿರ್ವಹಣಾ ಸಂಯೋಜಕರಾದ ಅರುಣ್ ಕುಮಾರ್ ಎಂ ಕೆ ಬೆಂಗಳೂರು, ದೀಪಕ್ ಸೋಮಶೇಖರ್, ಶ್ರೀಮತಿ ವಿಜಯ ಶಿವರುದ್ರಪ್ಪ, ಮತ್ತು ಕನ್ನಡಿಗರು ದುಬೈ ಸಮಿತಿ ಸದಸ್ಯರುಗಳಾದ ಶ್ರೀಮತಿ ಮಮತಾ ರಾಘವೇಂದ್ರ, ಮಲ್ಲಿಕಾರ್ಜುನ ಅಂಗಡಿ, ಚಂದ್ರಕಾಂತ್, ಶ್ರೀನಿವಾಸ್ ಅರಸ್, ವೆಂಕಟರಮಣ ಕಾಮತ್, ರಫೀಕಲಿ ಕೊಡಗು, ವಿನೀತ್ ಹಾಗೂ ದುಬೈ ಕನ್ನಡ ರಾಜ್ಯೋತ್ಸವ 2018 ಇದರ ಉಪ ಸಮಿತಿ ಸದಸ್ಯರಾದ ಮಧು ಬೆಂಗಳೂರು, ಮಮತಾ ಬೆಂಗಳೂರು, ಹಾದಿಯ ಮಂಡ್ಯ, ಅನಿತಾ ಶಾರ್ಜ, ಸರೋಜಾ, ಪ್ರೀತಿ, ಸುಧಾ ಮತ್ತಿತರರು ಇದ್ದರು.

ಕನ್ನಡಿಗರು ದುಬೈ ಅಧ್ಯಕ್ಷ ಸದನ್ ದಾಸ್ ಸ್ವಾಗತಿಸಿದರು. ಶ್ರೀಮತಿ ಭಾಗ್ಯ ಸದನ್ ದಾಸ್ ಮತ್ತು ಶ್ರೀಮತಿ ವಿಜಯ ಶಿವರುದ್ರಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ದುಬೈ ಕನ್ನಡ ರಾಜ್ಯೋತ್ಸವ  ಮುಖ್ಯ ನಿರ್ವಾಹಕರಾದ ಅರುಣ್ ಕುಮಾರ್ ಎಂ ಕೆ ಬೆಂಗಳೂರು ಅವರು ವಂದಿಸಿದರು.

Pages