ಮತ್ತೆ ಪರದೆ ಶೈಲಿಯಲ್ಲಿ ಮೂಡಿ ಬರಲಿದೆ ‘ಬಯ್ಯಮಲ್ಲಿಗೆ’ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮತ್ತೆ ಪರದೆ ಶೈಲಿಯಲ್ಲಿ ಮೂಡಿ ಬರಲಿದೆ ‘ಬಯ್ಯಮಲ್ಲಿಗೆ’

Share This
ಮಂಗಳೂರು: ಬಯ್ಯಮಲ್ಲಿಗೆ ತುಳು ನಾಟಕವು ತುಳು ರಂಗಭೂಮಿಯಲ್ಲಿ ದಾಖಲೆ ಬರೆದಿರುವಂಥದ್ದು. ಪರದೆ ನಾಟಕದ ಕಾಲದಲ್ಲಿ ಇದರ  ವೈಭವ ಮತ್ತು ಜೈತ್ರಯಾತ್ರೆಗೆ ಯಾವುದೂ ಎಣೆಯಾಗಿರಲಿಲ್ಲ. ಈಗಲೂ ನಾಟಕಕ್ಕೆ ಬೇಡಿಕೆ ಇದೆ.
ಡಾ. ಸಂಜೀವ ದಂಡೆಕೇರಿ ಅವರ ನಾಟಕವು ಸುಮಾರು 54 ವರ್ಷಗಳ ಹಿಂದೆ ರಚಿತವಾಗಿದ್ದರೂ ಅದು ಹೊಂದಿರುವ ಗಟ್ಟಿತನವು ಅದನ್ನು ಚಿರಯೌವನದಿಂದ ತುಳುಕುವಂತೆ ಮಾಡಿದೆ. ಈಗ ನಾಟಕವು ಅದೇ ಹಿಂದಿನ ರೂಪದಲ್ಲಿ ಸುರತ್ಕಲ್ನಲ್ಲಿ ಮೂಡಿ ಬರಲಿದೆ.

ರಂಗಚಾವಡಿ ಮಂಗಳೂರು ಇದರ ವಾರ್ಷಿಕೋತ್ಸವದ  ಅಂಗವಾಗಿ ನ.18 ಸಂಜೆ 3.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ಬಯ್ಯಮಲ್ಲಿಗೆ ನಾಟಕವು ಪ್ರದರ್ಶನಗೊಳ್ಳಲಿದೆಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ದೇಶನದಲ್ಲಿ ರಮೇಶ್ ರೈ ಕುಕ್ಕುವಳ್ಳಿ ಮುಂತಾದ ಪ್ರಮುಖ ಮತ್ತು ಪ್ರತಿಭಾನ್ವಿತ ಕಲಾವಿದರ ಆಭಿನಯದಲ್ಲಿ ನಾಟಕ ಮೂಡಿ ಬರಲಿದೆ. ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ .ಕೆ. ವಿಜಯ್ (ಕೋಕಿಲಾ) ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನಿಸಲಾಗುವುದು.

ತುಳುವೆರೆ ಉಡಲ್ ಜೋಡುಕಲ್ಲು ಪ್ರತಿಭಾನ್ವಿತ ಕಲಾವಿದರ ತಂಡ. ಅದರಲ್ಲಿ  ಹಿಂದಿನ ಶೈಲಿಯಲ್ಲಿಯೇ ಪರದೆಯಲ್ಲಿ ಮೂಡಿ ಬರಲಿರುವ ಬಯ್ಯಮಲ್ಲಿಗೆಯು ತಲೆಮಾರಿನ  ಪ್ರೇಕ್ಷಕರಿಗೆ ಒಂದು ಹೊಸ ಅನುಭವ  ನೀಡಲಿದೆ ಮತ್ತು ಹಿಂದಿನ ನಾಟಕ ಮತ್ತು ಅದು ಪ್ರದರ್ಶನವಾಗುತ್ತಿದ್ದ ಶೈಲಿಯ ಮಹತ್ವವನ್ನು ತೋರಿಸಿಕೊಡಲಿದೆ. ಬಯ್ಯ ಮಲ್ಲಿಗೆ ಹಿಂದೆ  1974ರಲ್ಲಿ ತುಳುವಿನಲ್ಲಿ ಸಿನಿಮಾ ಕೂಡಾ ಆಗಿತ್ತು.  ಜಯಮಾಲ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದರು. ನಾಟಕ ರೂಪದಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡಿರುವ ಬಯ್ಯಮಲ್ಲಿಗೆ ಬಾರಿ ಮತ್ತೆ ಗತಕಾಲವನ್ನು ನೆನಪಿಸುವ ರೀತಿಯಲ್ಲಿ  ಪ್ರೇಕ್ಷಕರ ಮುಂದೆ ಪ್ರದರ್ಶನಗೊಳ್ಳಲಿದೆ. ಡಾ. ಸಂಜೀವ ದಂಡೆಕೇರಿ ಅವರಿಗೆ ನಾಟಕ ಭಾರೀ ಹೆಸರು ಮತ್ತು ಕೀರ್ತಿಯನ್ನು ತಂದುಕೊಟ್ಟಿತು. ಗಟ್ಟಿ ಕಥೆಯಾಧಾರಿತ ಸಾಂಸಾರಿಕ ನಾಟಕವನ್ನು ಬಹಳಷ್ಟು ಸಂಘ ಸಂಸ್ಥೆಗಳು ಪ್ರದರ್ಶನಗೊಳಿಸಿದ್ದವು.

Pages