ನ.9ಕ್ಕೆ ದುಬೈ ಕನ್ನಡ ರಾಜ್ಯೋತ್ಸವ : ಡಾ. ಮೋಹನ್ ಆಳ್ವರಿಗೆ ‘ಕನ್ನಡ ರತ್ನ’ ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನ.9ಕ್ಕೆ ದುಬೈ ಕನ್ನಡ ರಾಜ್ಯೋತ್ಸವ : ಡಾ. ಮೋಹನ್ ಆಳ್ವರಿಗೆ ‘ಕನ್ನಡ ರತ್ನ’ ಪ್ರಶಸ್ತಿ

Share This
BUNTS NEWS, ದುಬಾಯಿ: ಕನ್ನಡಿಗರು ದುಬೈ ವತಿಯಿಂದ ನ.9ರಂದು ದುಬಾಯಿಯ ಆಲ್ಕೂಝಿನಲ್ಲಿರುವ ಕ್ರೆಡೆನ್ಸ್ ಹೈ ಸ್ಕೂಲ್ ಸಭಾಂಗಣದಲ್ಲಿ ಪ್ರೇಷಿಯಸ್ ಪಾರ್ಟೀಸ್ ಅಂಡ್ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ನಡೆಯುವ ಕನ್ನಡ ರಾಜ್ಯೋತ್ಸವದಲ್ಲಿ ನೀಡುವ ‘ಕನ್ನಡ ರತ್ನ’ ಪ್ರಶಸ್ತಿಗೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವಾ ಅವರು ಪಾತ್ರರಾಗಿದ್ದಾರೆ.
ಸಮಾರಂಭವನ್ನು ತಾಂಬೂಲ ಜ್ಯೋತಿಷಿ ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಂದ ದೀಪ ಬೆಳಗಿಸುವ ಮೂಲ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ರವಿಚಂದ್ರನ್ ಅವರಿಗೆ ‘ಕನ್ನಡ ಕಲಾ ರತ್ನ’ ಗೌರವ ಪ್ರಶಸ್ತಿ ಪಡೆಯಲಿದ್ದಾರೆ. ನಿರೂಪಕಿ ಶ್ರೀಮತಿ ಅಪರ್ಣಾ, ಅಪ್ರತಿಮ ಹಾಸ್ಯಗಾರ ನಾಗರಾಜ್ ಕೋಟೆ ಅವರು ಈ ಸಮಾರಂಭದಲ್ಲಿ ಭಾಗವಹಿಸುವರು.

ಅಕ್ಷರ ಸಂತ ಬಿರುದು ಪಡೆದಿರುವ ಹರೇಕಲ ಹಾಜಬ್ಬರಗೆ ಗೌರವ ಅಭಿನಂದನೆ, ಕನ್ನಡ ಸಂಘಟನೆಗಳಿಗೆ ನೀಡುವ ಪ್ರೋತ್ಸಾಹ ಸಹಾಯಕ್ಕಾಗಿ ದುಬೈ ಉದ್ಯಮಿ ಎಮ್ ಸ್ಕ್ವೇರ್ ಎಂಜಿನೀರಿಂಗ್ ಸಂಸ್ಥೆಯ ಮಾಲಿಕ ಮುಸ್ತಫಾ ಮತ್ತು ಅವರ ಧರ್ಮ ಪತ್ನಿಗೆ ‘ಕನ್ನಡ ಕೌಸ್ತುಭ’ ಗೌರವ ಪ್ರಶಸ್ತಿ ನೀಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕನ್ನಡಿಗರು ದುಬೈ ಅಧ್ಯಕ್ಷ ಸದನ್ ದಾಸ್, ಮಾಜಿ ಅಧ್ಯಕ್ಷರುಗಳಾದ ವೀರೇಂದ್ರ ಬಾಬು, ಶ್ರೀಮತಿ ಉಮಾ ವಿಧ್ಯಾದರ್, ಮಲ್ಲಿಕಾರ್ಜುನ ಗೌಡ ಅವರೊಂದಿಗೆ ದುಬೈ ಕನ್ನಡ ರಾಜ್ಯೋತ್ಸವದ ಮುಖ್ಯ ನಿರ್ವಹಣಾ ಸಂಯೋಜಕರಾದ ಅರುಣ್ ಕುಮಾರ್ ಎಂ ಕೆ ಬೆಂಗಳೂರು, ದೀಪಕ್ ಸೋಮಶೇಖರ್, ಶ್ರೀಮತಿ ವಿಜಯ ಶಿವರುದ್ರಪ್ಪ, ಮತ್ತು ಕನ್ನಡಿಗರು ದುಬೈ ಸಮಿತಿ ಸದಸ್ಯರುಗಳಾದ ಶ್ರೀಮತಿ ಮಮತಾ ರಾಘವೇಂದ್ರ, ಮಲ್ಲಿಕಾರ್ಜುನ ಅಂಗಡಿ, ಚಂದ್ರಕಾಂತ್, ಶ್ರೀನಿವಾಸ್ ಅರಸ್, ವೆಂಕಟರಮಣ ಕಾಮತ್, ರಫೀಕಲಿ ಕೊಡಗು, ವಿನೀತ್ ರಾಜ್ ಅವರುಗಳು ಹಾಜರಿದ್ದರು.

ದುಬೈ ಕನ್ನಡ ರಾಜ್ಯೋತ್ಸವ 2018 ಇದರ ಉಪ ಸಮಿತಿ ಸದಸ್ಯರುಗಳಾದ ಮಧು ಬೆಂಗಳೂರು, ಮಮತಾ ಬೆಂಗಳೂರು, ಹಾದಿಯ ಮಂಡ್ಯ, ಅನಿತಾ ಶಾರ್ಜ, ಸಯಿದಾ ಬೆಂಗಳೂರು, ಸರೋಜಾ, ಪ್ರೀತಿ, ಸುಧಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

Pages