BUNTS NEWS, ಯುಎಇ: ಕೊಲ್ಲಿ ರಾಷ್ಟ್ರದಲ್ಲಿನ ತುಳುವರ
ಒಕ್ಕೂಟ, ಸಾಗರೋತ್ತರ ತುಳುವರ ಕೂಟದ ಮುಖ್ಯಸ್ಥ
ಹಾಗೂ ದುಬಾಯಿ ತುಳು ಸಮ್ಮೇಳನದ
ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ
ಅಬುಧಾಬಿ ಮತ್ತು ಬಳಗದ ಸಾಂಘಿಕತ್ವದಲ್ಲಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಹಾಗೂ ಅಖಿಲಭಾರತ ತುಳು ಒಕ್ಕೂಟ ಇವುಗಳ
ಸಹಯೋಗದಲ್ಲಿ ಆಯೋಜಿಸಲಾದ ದ್ವಿದಿನಗಳ ‘ವಿಶ್ವ ತುಳು ಸಮ್ಮೇಳನ
ದುಬಾಯಿ'ಗೆ ನ.24ರಂದು ಸಮಾರೋಪಗೊಂಡಿತು.
ವಿಶ್ವ ತುಳು ಸಮ್ಮೇಳನದಲ್ಲಿ ತುಳು
ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ
ರಾಜ್ಯ ಸರಕಾರದ ಮೂಲಕ ಕೇಂದ್ರ
ಸರಕಾರವನ್ನು ಒತ್ತಾಯಿಸಲು ಒಕ್ಕೊರಲ ಏಕಮಾತ್ರ ನಿರ್ಣಯ
ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ ಸಮ್ಮೇಳನದ ಅಧ್ಯಕ್ಷ, ಅನಿವಾಸಿ ಭಾರತೀಯ ಖ್ಯಾತ
ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಅವರಿಗೆ ನಿರ್ಣಯದ
ಪ್ರತಿಯನ್ನು ನೀಡಿ, ಕೇಂದ್ರ ಸರ್ಕಾರವನ್ನು
ಒತ್ತಾಯಿಸುವಂತೆ ಸಮ್ಮೇಳನದಲ್ಲಿ ಪಾಲ್ಗೊಂಡ ಗಣ್ಯರು ಆಗ್ರಹಿಸಿದರು.
ಸಮ್ಮೇಳನದ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ
ಬಾಲಿವುಡ್ ನಟ ಸುನಿಲ್ ಶೆಟ್ಟಿ,
ತುಳು ಭಾಷೆ, ಪರಂಪರೆ, ಆಚಾರ-ವಿಚಾರಗಳನ್ನು ಮೆಲುಕು ಹಾಕಿ, ತುಳು
ಭಾಷೆಯ ಬಗ್ಗೆ ತಮಗಿರುವ ಅಪಾರ
ಪ್ರೀತಿಯನ್ನು ಕೊಂಡಾಡಿದರು. ವಿವಿಧ ಕ್ಷೇತ್ರದ ಸಾಧನೆಗೆ
ತುಳುವರು ಸಾಕ್ಷಿಯಾಗಿದ್ದಾರೆ ಎಂದ ಅವರು ಮುಂದೆ ತುಳು ಸಿನೆಮಾದಲ್ಲಿ ನಟಿಸುವ
ಹಂಬಲ ವ್ಯಕ್ತಪಡಿಸಿದರು. ತಾನು
ತುಳು ಸಿನೆಮಾದಲ್ಲಿ ನಟಿಸಿ ಬಂದ ಹಣವನ್ನುತುಳುನಾಡಿನ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ
ಮೀಸಲಾಗಿಡುವುದಾಗಿ ತಿಳಿಸಿದರು.
ಸಮ್ಮೇಳನದಲ್ಲಿ ಸಂಗೀತ
ನಿರ್ದೇಶಕ ಗಾಯಕ ಗುರುಕಿರಣ್ ಹಾಗೂ ತಂಡ ನಡೆಸಿ ಕೊಟ್ಟ ರಸಮಂಜರಿ ಎಲ್ಲರ ಗಮನ ಸೆಳೆಯಿತು.
ತುಳು
ಸಿನೆಮಾ ನಟ ಭೋಜರಾಜ್ ವಾಮಂಜೂರು
ಕೂಡ ತುಳು ಹಾಡೊಂದನ್ನು ಹಾಡಿ
ರಂಜಿಸಿದರು. ಸ್ಥಳೀಯ ಗಾಯಕರಾದ ಪ್ರಮೋದ್
ಹಾಗೂ ತಂಡವರು ತಮ್ಮ ಸುಮಧುರ
ಕಂಠದ ಮೂಲಕ ಹಾಡಿದರು. ಜೊತೆಗೆ
ಹಲವು ತಂಡಗಳಿಂದ ನೃತ್ಯ ರೂಪಕ, ಮನೋರಂಜನಾ
ಕಾರ್ಯಕ್ರಮ ನಡೆಯಿತು.
ಸಮಾರೋಪ
ಸಮಾರಂಭವನ್ನು ಉಡುಪಿ ಪುತ್ತಿಗೆ ಮಠಾಧೀಶ
ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಒಡಿಯೂರು
ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ,
ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ
ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ
ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ
ಹೆಗ್ಗಡೆ, ಅನಿವಾಸಿ ಭಾರತೀಯ ಉದ್ಯಮಿ
ಡಾ.ಬಿ.ಆರ್.ಶೆಟ್ಟಿ,
ಸಂಗೀತ ನಿರ್ದೇಶಕ ಗುರುಕಿರಣ್, ಕ್ರೈಸ್ತ ಧರ್ಮಗುರು ವಂ.ಎಬ್ನೆಝರ್ ಜತ್ತನ್ನ, ಪತ್ರಕರ್ತ ಅಬ್ದುಸ್ಸಲಾಂ ಪುತ್ತಿಗೆ, ಅಖಿಲ ಭಾರತ ತುಳು
ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ,
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ
ಎ.ಸಿ.ಭಂಡಾರಿ,
ಸಮ್ಮೇಲೇನಾದ ರೂವಾರಿ ಸರ್ವೋತ್ತಮ ಶೆಟ್ಟಿ,
ಶೋಧನ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ
ಮೊದಲು ಯಕ್ಷಗಾನ ತಾಳಮದ್ದಳೆ ನಡೆಯಿತು.
ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ
ನಡೆದ ತಾಳಮದ್ದಳೆಯಲ್ಲಿ ಸತೀಶ್ ಶೆಟ್ಟಿ ಪಾಟೀಲ, ಜಬ್ಬಾರ್
ಸಮೋ, ಕಾದ್ರೆ ನವನೀತ್ ಶೆಟ್ಟಿ,
ತೋನ್ಸೆ ಪುಷ್ಕಳ್ ಕುಮಾರ್, ದಯಾನಂದ್ ಕತ್ತಲ್ಸರ್ ತಮ್ಮ
ಚಾಕಚಕ್ಯತೆಯನ್ನು ಪ್ರದರ್ಶಿಸಿದರು. ಕವಿಕೂಟದ ಅಧ್ಯಕ್ಷತೆ ಡಾ.ವೈ.ಏನ್.ಶೆಟ್ಟಿ ವಹಿಸಿದ್ದರು. ಪ್ರಕಾಶ್
ರಾವ್ ಪಯ್ಯಾರ್, ಇರ್ಷಾದ್ ಮೂಡಬಿದ್ರೆ, ಗೋಪಿನಾಥ್
ರಾವ್, ಎಂ.ಈ.ಮೂಳೂರು,
ಅವಿನಾಶ್ ಭಟ್, ನಾಗಭೂಷಣ್ ರಾವ್
ಹಾಗು ಉಷಾ ಕೋಲ್ಪೆ ಕವಿಕೂಟದಲ್ಲಿ
ಭಾಗವಹಿಸಿದ್ದರು.
ಸಮಾರಂಭದಲ್ಲಿ ವಿಶ್ವದ
ತುಳು ಕೂಟಗಳ ಅಧ್ಯಕ್ಷರನ್ನು, ಕಲಾವಿದರನ್ನು ಅನೇಕ ಮಹಾನೀಯರನ್ನು ಸಮ್ಮೇಳನ ಅಧ್ಯಕ್ಷರಾದ ಡಾ. ಬಿ.ಆರ್.
ಶೆಟ್ಟಿ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಭಾಸ್ಕರ್ ರೈ ಕುಕ್ಕವಳ್ಳಿ,
ಕದ್ರಿ ನವನೀತ್ ಶೆಟ್ಟಿ, ಆರ್ಜೆ ಸಾಯಿಹೀಲ್ ರೈ,
ಆರ್ಜೆ ಪ್ರಿಯಾ ಹರೀಶ್
ಶೆಟ್ಟಿ, ನವೀನ್ ಶೆಟ್ಟಿ ಯೆಡ್ಮಾರ್
ಕಾರ್ಯಕ್ರಮ ನಿರೂಪಿಸಿದರು.