BUNTS NEWS, ಯುಎಇ: ಕರ್ನಾಟಕ ಅನಿವಾಸಿ ಭಾರತೀಯ
ಸಮಿತಿ ಯುಎಇ ವತಿಯಿಂದ ಅನಿವಾಸಿ ಭಾರತೀಯರ ಸಮಸ್ಯೆ ಕುರಿತಾಗಿ
ಸಚಿವ ಯು.ಟಿ. ಖಾದರ್, ಸಚಿವೆ ಜಯಮಾಲ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಜತೆ ಸಂವಾದ
ನಡೆಯಿತು.
ನಗರದ ಅಲ್ಕುಸಿನ ಫೊರ್ಚುನ್ ಪ್ಲಾಝದಲ್ಲಿ ನ.24 ಕರ್ನಾಟಕ ಅನಿವಾಸಿ
ಭಾರತೀಯ ಸಮಿತಿ ಯುಎಇ ಸಂವಾದದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಮುಖ್ಯವಾಗಿ
ಕರ್ನಾಟಕದ ಅನಿವಾಸಿಗರಿಗೆ
ಕೇರಳದ ಏನ್ ಆರ್ ಕೆ
ರೀತಿಯ ಸವಲತ್ತನ್ನು ಕೆಂದ್ರ ಸರ್ಕಾರ ಹಾಗೂ
ಕರ್ನಾಟಕ ಸರಕಾರ ನೀಡುವಂತೆ, ದುಬೈನಿಂದ
ಊರಿಗೆ ವಾಪಾಸ್ಸಾಗುವ ವಿಮಾನದರ ಅಧಿಕವಾಗಿದ್ದು ಕಡಿಮೆ ಮಾಡುವಂತೆ, ಮಂಗಳೂರು ವಿಮಾನ ನಿಲ್ದಾನದಿಂದ ಕಾಸರಗೋಡು,
ಕುಂದಾಪುರ, ಭಟ್ಕಳ, ಪುತ್ತೂರಿಗೆ ಬಸ್ಸಿನ
ವ್ಯವಸ್ಥೆ ಮಾಡುವಂತೆ, ಯುಎಇಯಲ್ಲಿ ಸಾವನಪ್ಪಿದವರ ಮೃತದೇಹ ಯಾವುದೇ ತೊಡಕಿಲ್ಲದೆ ಊರಿಗೆ ಕಳುಹಿಸಲು ರಾಜ್ಯ ಸರ್ಕಾರದ ಸಹಕಾರ ಸಿಗುವಂತೆ ಹಾಗೂ ಇನ್ನಿತರ ವಿಚಾರದ ಬಗ್ಗೆ ಯುಎಇಯ ಕನ್ನಡಿಗರ ಸಮಸ್ಯೆಗಳನ್ನು
ಕರ್ನಾಟಕ ಅನಿವಾಸಿ ಭಾರತಿಯ ಸಮಿತಿಯ
ಸದಸ್ಯರು ಚರ್ಚಿಸಿದ್ದರು.
ಇದೇ ಸಂದರ್ಭ ಯುಎಇ
ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನ ಪರಿಹರಿಸುವಂತೆ ಸಚಿವರ ಮೂಲಕ ಮುಖ್ಯಮಂತ್ರಿ
ಅವರಿಗೆ ಮನವಿ ಪತ್ರವನ್ನು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ
ಯುಎಇ ಸಲ್ಲಿಸಿತು.
ಕರ್ನಾಟಕ
ಅನಿವಾಸಿ ಭಾರತಿಯ ಸಮಿತಿಯ ಅಧ್ಯಕ್ಷ ಪ್ರವೀಣ್
ಕುಮಾರ್ ಶೆಟ್ಟಿ ಅವರು ಸಚಿವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಕರ್ನಾಟಕ
ಅನಿವಾಸಿ ಭಾರತಿಯ ಸಮಿತಿಯ ಕಾರ್ಯದರ್ಶಿ
ಪ್ರಭಾಕರ ಅಂಬಲ್ತರೆ ಸ್ವಾಗತ ಭಾಷಣ ಮಾಡಿದರು. [ವರದಿ:
ವಿಜಯ
ಕುಮಾರ್
ಶೆಟ್ಟಿ ಮಜಿಬೈಲ್ ದುಬೈ-www.BuntsNews.com]