ಗಾಯತ್ರಿ ಮಂತ್ರದಿಂದ ಲೋಕ ಕಲ್ಯಾಣ : ಲಕ್ಷ ಜಪ ಯಜ್ಞ ಧಾರ್ಮಿಕ ಸಭೆಯಲ್ಲಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಗಾಯತ್ರಿ ಮಂತ್ರದಿಂದ ಲೋಕ ಕಲ್ಯಾಣ : ಲಕ್ಷ ಜಪ ಯಜ್ಞ ಧಾರ್ಮಿಕ ಸಭೆಯಲ್ಲಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ

Share This
ಉಡುಪಿ: ವ೦ದೇ ಮಾತರಂ, ಜನಗಣಮನ, ರಾಷ್ಟ್ರ ಗೀತೆಗಳಾದರೆ ಲೋಕಕ್ಕೆ ಸುಖ ಶಾಂತಿ ನೆಮ್ಮದಿ ಕರುಣಿಸುವ ಗಾಯತ್ರಿ ಮಂತ್ರ ವಿಶ್ವ ಗೀತೆ ಮಂತ್ರ ಉದ್ಧಾರದಿಂದ ಜಗತ್ತಿನ ಕಲ್ಯಾಣ ಸಾಧ್ಯ ಎಂದು ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಅವರು ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶುಕ್ರವಾರ ಸಂಪನ್ನಗೊಂಡ ಲಕ್ಷ ಗಾಯತ್ರಿ ಮಂತ್ರ ಜಪಯಜ್ಞದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಸಕಲ ಜೀವರಾಶಿಗಳಿಗೂ ಸುಖ ಶಾಂತಿ ನೆಮ್ಮದಿಯ ಜತೆಗೆ ಒಳ್ಳೆಯ ಬುದ್ಧಿ ನೀಡುವಂತೆ ಭಗವಂತನಲ್ಲಿ ನಾವೆಲ್ಲ ಪ್ರಾರ್ಥಿಸುತ್ತೇವೆ ಬ್ರಾಹ್ಮಣರಿಗೆ ಭಾರತೀಯರಿಗೆ ಒಳಿತಾಗುವ ಉದ್ದೇಶದಿಂದ ಪ್ರಾರ್ಥನೆಯಲ್ಲ ಜಪ ತಪ ಹೋಮ ಹವನಾದಿಗಳಿಂದ ಒಳಿತಾಗಲಿದೆ ಬದಲಾಗಿ ಇದೆಲ್ಲ ಜಗತ್ತಿನ ಹಿತಕ್ಕಾಗಿ ಎಂದರು.

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಕಾಣಿಯುರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್, ಜನಪದ ವಿದ್ವಾಂಸ ಎಲ್ ಕೆ ಕುಂಡಂತಾಯ, ನಾಗಪಾತ್ರಿ ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ, ಪ್ರಾಂಶುಪಾಲೆ ಶ್ರೀಮತಿ ಉಷಾ ರಮಾನಂದ, ಉಪ್ಪೂರು ಭಾಗ್ಯಲಕ್ಷ್ಮೀ, ಆನಂದ ಬಾಯರಿ, ಕೃಷ್ಣಮೂರ್ತಿ ತಂತ್ರಿ, ಶಾರ್ಕೆ ದಾಮೋದರ್ ಭಟ್ ಮೂಲ್ಕಿ ವಾದಿರಾಜ್ ಭಟ್, ಕಲ್ಯಾ ಅಶೋಕ್ ಭಟ್ ವಿಪ್ರ ಬಾಂಧವರು ಹಾಗೂ ಭಕ್ತರುಗಳು ಉಪಸ್ಥಿತರಿದ್ದರು.

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರ ಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಪರೂಪದ ಲಕ್ಷ ಗಾಯತ್ರಿ ಮಂತ್ರ ಜಪಯಜ್ಞ ಸಾವಿರಾರು ಸಂಖ್ಯೆಯ ಭಕ್ತರ ಸಮಕ್ಷಮದಲ್ಲಿ ಪಂಚ ಭಕ್ಷ್ಯ ಸಹಿತವಾದ ಮಹಾ ಅನ್ನದಾನದೊಂದಿಗೆ ನೆರವೇರಿತು. [ಸುದ್ದಿ : ದಿನೇಶ್ ಕುಲಾಲ್]

Pages