BUNTS NEWS, ತಲಪಾಡಿ: ತಲಪಾಡಿ ಪಂಜಳದ ಶ್ರೀಮತಿ
ಮೋಹಿನಿ ಶೆಟ್ಟಿಯವರ ಮನವಿಗೆ ಸ್ಪಂದಿಸಿದ ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ
ವಿಜಯ ಪ್ರಸಾದ್ ಆಳ್ವಾ ಅವರು ಸದ್ರಿ
ಸ್ಥಳಕ್ಕೆ ಭೇಟಿ ನೀಡಿ ನಿವೇಶನದ
ಬಗ್ಗೆ ವಿಮರ್ಶಿಸಿದಾಗ ನ್ಯಾಯಾಲಯದಲ್ಲಿ ಕೌಟುಂಬಿಕ ತಕರಾರು ಇರುವ ಬಗ್ಗೆ
ಮಾಹಿತಿ ದೊರಕಿದ್ದು 3ರಿಂದ 4 ಸೆಂಟ್ಸ್ ಜಾಗ
ಲಭಿಸುವ ಅವಕಾಶ ಇರುತ್ತದೆ.
ಈ ಬಗ್ಗೆ ಪ್ರತಿವಾದಿ ಮತ್ತು
ಕುಟುಂಬ ವರ್ಗದವರಲ್ಲಿ ಸ್ಥಳದಲ್ಲಿಯೇ ಚರ್ಚಿಸಲಾಗಿ ಮುಂದಿನ ಹಂತದಲ್ಲಿ ಇತ್ಯರ್ಥ
ಪಡಿಸುವ ನಿಲುವಿಗೆ ಎಲ್ಲರ ಸಮಕ್ಷಮದಲ್ಲಿ ಬರಲಾಗಿದೆ.
ನಂತರ ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಆಶ್ರಯ ಯೋಜನೆಯ ಅಡಿಯಲ್ಲಿ
ಮನೆ ನಿರ್ಮಿಸಿ ಕೊಡಲು ಒಕ್ಕೂಟದ ಅಧ್ಯಕ್ಷರಾದ
ಐಕಳ ಹರೀಶ್ ಶೆಟ್ಟಿಯವರಲ್ಲಿ ಮನವಿ
ಮಾಡಲು ತಿಳಿಸಲಾಯಿತು.
ಈ ಕುಟುಂಬವು
ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವುದು
ಈ ಸಮಯದಲ್ಲಿ ಕಂಡು ಬಂದ ಸತ್ಯ.
ಈ ಸಂದರ್ಭದಲ್ಲಿ ಸೋಮೇಶ್ವರ
ಬಂಟರ ಸಂಘದಿಂದ ಒಕ್ಕೂಟದ ಪ್ರತಿನಿಧಿಯಾಗಿ
ಚಂದ್ರಶೇಖರ ಶೆಟ್ಟಿ, ಉಳ್ಳಾಲದ ಗಂಗಾಧರ
ಶೆಟ್ಟಿ, ಸೋಮೇಶ್ವರ ಬಂಟರ ಸಂಘದ ಕಾರ್ಯದರ್ಶಿ
ಮೋಹನ್ ದಾಸ್ ಶೆಟ್ಟಿ, ತಲಪಾಡಿಯ
ರಾಜಾರಾಮ ಅಡ್ಯಂತಾಯ, ಪ್ರದೀಪ್ ಕಿಲ್ಲೆ, ಯಶು
ಪಕ್ಕಳ ತಲಪಾಡಿ, ಜಯರಾಮ ಶೆಟ್ಚಿ,
ಪುರುಷೋತ್ತಮ ಶೆಟ್ಟಿ ಮತ್ತು ಚಂದ್ರಹಾಸ
ಶೆಟ್ಚಿ ಉಪಸ್ಥಿತರಿದ್ದರು.