ಪದ್ಮಶ್ರೀ ಡಾl ಬಿ. ಆರ್. ಶೆಟ್ಟಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ - BUNTS NEWS WORLD

ಪದ್ಮಶ್ರೀ ಡಾl ಬಿ. ಆರ್. ಶೆಟ್ಟಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

Share This
BUNTS NEWS, ಅಬುಧಾಬಿ: ಕರ್ನಾಟಕ ಸಂಘ ಅಬುದಾಬಿಯ ವತಿಯಿಂದ ನ.2ರಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉದ್ಯಮಿ ಪದ್ಮಶ್ರೀ ಡಾl ಬಿ.ಆರ್. ಶೆಟ್ಟಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಇಂಡಿಯನ್ ಕಲ್ಚರಲ್ ಸೋಷ್ಯಲ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಹೆಮ್ಮೆಯ ಪೋಷಕರು ಹಾಗೂ ಯುಎಇ ತುಳು ಕನ್ನಡಿಗರ ಕಣ್ಮಣಿ ಡಾ.ಬಿ.ಆರ್  ಶೆಟ್ಟಿಯವರಿಗೆ ಕರ್ನಾಟಕದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮೂಹ ಗೀತೆ, ಜನಪದ ನೃತ್ಯ ಹಲವಾರು ಕಾರ್ಯಕ್ರಮಗಳು ಜರಗಿತು. ಪ್ರೊ.ಕೃಷ್ಣ ಗೌಡರ ಹಾಸ್ಯ  ಭಾಷಣವಂತು ಸೇರಿದವರನ್ನು ನಗೆ ಕಡಲಲ್ಲಿ ತೇಲಿಸಿತು. ಸರ್ವೋತಮ ಶೆಟ್ಟಿ ಹಾಗೂ ಮನೋಹರ ತೋನ್ಸೆಯವರ ಕಾರ್ಯಕ್ರಮದ ನಿರೂಪಣೆ ಬಹಳ ಸೊಗಸಾಗಿ ಮೂಡಿ ಬಂತು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಪ್ರಾಯೋಜಕರನ್ನು ತುಳು ಕನ್ನಡ ಸಂಘ ಸಂಸ್ಥೆಗಳ ರೂವಾರಿಗಳು ಹಾಗೂ ಮಾಧ್ಯಮ ಮಿತ್ರರನ್ನು ಗೌರವಿಸಲಾಯಿತು.
 ಸಮಾರಂಭದಲ್ಲಿ ಯುಎಇ ಎಕ್ಷೆಂಜಿನ ಸುಧಿರ್ ಕುಮರ್ ಶೆಟ್ಟಿ, ಹಾಸ್ಯ ಬಾಷಾಣಗಾರ ಪ್ರೋ. ಕೃಷ್ಣಗೌಡ, ಯು. . ಭಾರತೀಯ ರಾಯಭಾರಿ ನವದೀಪ್ ಸುರಿ, ಉದ್ಯಮಿ ರೊನೊಲ್ಡ್ ಫಿಂಠೊ, ಇಂಡಿಯಾನ್ ಸೋಷಿಯಲ್ ಕಲ್ಚರಲ್ ಸೆಂಟರ್ ಅಬುಧಾಬಿಯ ಅಧ್ಯಕ್ಷ ರಮೇಶ್ ಪಣಿಕಾರ್, ಸೆಂಟರ್ ಉಪಾಧ್ಯಕ್ಷ ಜಯರಾಮ್ ರೈ ಹಾಗೂ ಅಬುಧಾಬಿ ಕರ್ನಾಟಕದ ಸಂಘದ ಸದಸ್ಯರು ಉಪಸ್ಥಿತರಿದ್ದರು.

Pages