ತಾಳಮದ್ದಳೆ ದಿಗ್ಗಜರಲ್ಲಿ ವಿದ್ವಾನ್ ಕಾಂತ ರೈಯವರ ಹೆಸರು ಮುಂಚೂಣಿಯಲ್ಲಿದೆ : ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ - BUNTS NEWS WORLD

 

ತಾಳಮದ್ದಳೆ ದಿಗ್ಗಜರಲ್ಲಿ ವಿದ್ವಾನ್ ಕಾಂತ ರೈಯವರ ಹೆಸರು ಮುಂಚೂಣಿಯಲ್ಲಿದೆ : ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ

Share This
ಮಂಗಳೂರು: ವಿದ್ವಾಂಸರ ಪ್ರವೇಶದಿಂದಾಗಿ ತಾಳಮದ್ದಳೆ ಕ್ಷೇತ್ರ ಹೆಚ್ಚು ಜನಪ್ರಿಯವಾಗಲು ಸಾಧ್ಯವಾಗಿದ್ದು ಅಂತಹ ತಾಳಮದ್ದಳೆ ದಿಗ್ಗಜರಲ್ಲಿ ವಿದ್ವಾನ್ ಕಾಂತ ರೈಯವರ ಹೆಸರು ಮುಂಚೂಣಿಯಲ್ಲಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಅವರು ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್’ಡಿಎಮ್ ಕಾನೂನು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ 6ನೇ ವರ್ಷದ ಕನ್ನಡ ನುಡಿಹಬ್ಬ'ಯಕ್ಷಗಾನ ತಾಳಮದ್ದಳೆ ಸಪ್ತಾಹ 2018'ರ 3ನೇ ದಿನ ಹಿರಿಯ ಯಕ್ಷಗಾನ ಅರ್ಥಧಾರಿ ವಿದ್ವಾನ್ ಕಾಂತ ರೈ ಮೂಡಬಿದಿರೆ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ನುಡಿನಮನ ಸಲ್ಲಿಸಿದರು. ಬೋಳಾರ ಹಳೆ ಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲ.ತಾರಾನಾಥ ಶೆಟ್ಟಿ ಬೋಳಾರ ದಿ.ಕಾಂತ ರೈಯವರ ಭಾವಚಿತ್ರದ ಮುಂದೆ ಜ್ಯೋತಿ ಬೆಳಗಿದರು. ಉದ್ಯಮಿಗಳಾದ ನವೀನ್ ಕಿಲ್ಲೆ ಆ್ಯಪಲ್ ಕಂಪ್ಯೂಟರ್ಸ್, ಎನ್. ಸಂತೋಷ್ ಕುಮಾರ್ ರೈ ಮಾತಾ ಬಿಲ್ಡರ್ಸ್, ಸಿ.ಯಸ್.ಭಂಡಾರಿ ಇರಾ, ಮಧುಕರ ರೈ ಕೊರೆಕಾನ ಮುಖ್ಯ ಅತಿಥಿಗಳಾಗಿದ್ದರು. ಕೆ.ಕಾಂತ ರೈ ಸ್ಮಾರಕ ಸಮಿತಿಯ ಕೆ.ಗಣೇಶ ರೈ ಹೊಸಂಗಡಿ ಮತ್ತು ವಿಶಾಲಕೀರ್ತಿ ರೈ ವೇದಿಕೆಯಲ್ಲಿದ್ದರು.

ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಪ್ರಾರ್ಥನೆಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಮಹಿಳಾ ಪ್ರತಿನಿಧಿ ನಿವೇದಿತಾ ಎನ್.ಶೆಟ್ಟಿ ನಿರೂಪಿಸಿದರು. ಕೋಶಾಧಿಕಾರಿ ಎಂ.ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಪದಾಧಿಕಾರಿಗಳಾದ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಮೇಶಾಚಾರ್ಯ ಗೇರುಕಟ್ಟೆ,ಸಿದ್ಧಾರ್ಥ ಅಜ್ರಿ, ಮಧುಸೂದನ ಅಲೆವೂರಾಯ,ಪೂರ್ಣೇಶ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ಹರೀಶ್ ಶೆಟ್ಟಿ ಸೂಡ ಅವರ ಭಾಗವತಿಕೆಯಲ್ಲಿ ಪ್ರಸಿಧ್ಧ ಕಲಾವಿದರಿಂದ ಮುದ್ದಣ ಕವಿಯ 'ರತ್ನಾವತಿ ಕಲ್ಯಾಣ' ತಾಳಮದ್ದಳೆ ಜರಗಿತು.

Pages