ದುಬೈ: ಕರ್ನಾಟಕ ಸಂಘ ಶಾರ್ಜಾ
ತನ್ನ 16ನೇ ವಾರ್ಷಿಕೋತ್ಸವ, ಕರ್ನಾಟಕ
ರಾಜ್ಯೋತ್ಸವ ಮತ್ತು ಪ್ರತಿಷ್ಠಿತ ಮಯೂರ
ಪ್ರಶಸ್ತಿ ಪ್ರಧಾನ ಸಮಾರಂಭ ನ.16ರಂದು ಸಂಜೆ 4ಕ್ಕೆ
ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್
ಸಭಾಂಗಣದಲ್ಲಿ ಅಯೋಜಿಸಲಾಗಿದೆ.
ಸಮಾರಂಭದ
ಮುಖ್ಯ ಅತಿಥಿಗಳಾಗಿ ಕನ್ನಡದ ಹಿರಿಯ ನಟ
ಅನಂತ್ ನಾಗ್, ಅವರ ಪತ್ನಿ
ಗಾಯತ್ರಿ ಅನಂತ್ ನಾಗ್ ಸೇರಿದಂತೆ
ಮತ್ತಿತರರು ಭಾಗವಹಿಸಲಿದ್ದಾರೆ.
ಈ ಬಾರಿಯ ಪ್ರತಿಷ್ಠಿತ
'ಮಯೂರ ಪ್ರಶಸ್ತಿ'ಯನ್ನು ಉದ್ಯಮಿ, ದಾನಿ,
ಐವರಿ ಗ್ರ್ಯಾಂಡ್ ಹೋಟೆಲ್ ಸಮೂಹ ಸಂಸ್ಥೆಗಳ
ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಡಿಸೋಜ ಅವರಿಗೆ
ನೀಡಿ ಗೌರವಿಸಲಾಗುವುದು.
ದುಬೈಯ ಹೆಸರಾಂತ ಉದ್ಯಮಿ, ಸಿನೆಮಾ
ನಿರ್ಮಾಪಕ, ಖ್ಯಾತ ಗಾಯಕರೂ ಆಗಿರುವ
ಹರೀಶ ಶೇರಿಗಾರ್ ಸಾರಥ್ಯದಲ್ಲಿ ಸುಮಧುರ ಕಂಠಸಿರಿಯ ಖ್ಯಾತ
ಗಾಯಕರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ
ಜರಗಳಿದ್ದು, ಮಂಗಳೂರಿನ ಖ್ಯಾತ ಸಂಗೀತ ನಿರ್ದೇಶಕ
ರಾಜ್ ಗೋಪಾಲ್ ಮತ್ತು ಅವರ
ತಂಡ ಸಂಗೀತ ನೀಡಲಿದ್ದಾರೆ.
ಜೊತೆಗೆ
ಯುಎಇಯ ಹೆಸರಾಂತ ಡ್ಯಾನ್ಸ್ ತಂಡಗಳಿಂದ
ಡ್ಯಾನ್ಸ್, ಬಗೆಬಗೆಯ ಸಾಂಸ್ಕೃತಿಕ, ಮನೋರಂಜನಾ
ಕಾರ್ಯಕ್ರಮಗಳು ಕೂಡ ಪ್ರೆಆದರ್ಶನಗೊಳ್ಳಲಿದೆ. ಕನ್ನಡ ಅಭಿಮಾನಿಗಳು
ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ
ಅಧ್ಯಕ್ಷ ಆನಂದ್ ಬೈಲೂರು, ಪ್ರಧಾನ
ಕಾರ್ಯದರ್ಶಿ ನೋವೆಲ್ ಡಿ'ಅಲ್ಮೇಡಾ
ತಿಳಿಸಿದ್ದಾರೆ.