ನ.23,24ಕ್ಕೆ ವಿಶ್ವ ತುಳು ಸಮ್ಮೇಳನ ದುಬಾಯಿ: ಅನಿವಾಸಿ ತುಳುವರ ಬೃಹತ್ ಸಮಾವೇಶ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನ.23,24ಕ್ಕೆ ವಿಶ್ವ ತುಳು ಸಮ್ಮೇಳನ ದುಬಾಯಿ: ಅನಿವಾಸಿ ತುಳುವರ ಬೃಹತ್ ಸಮಾವೇಶ

Share This
BUNTS NEWS, ದುಬೈ:"ವಿಶ್ವ ತುಳು ಸಮ್ಮೇಳನ ದುಬಾಯಿ" ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಅನಿವಾಸಿ ತುಳುವರ ಬೃಹತ್ ಸಮಾವೇಶ. ಸಾಗರೋತ್ತರ ತುಳುವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲಭಾರತ ತುಳು ಒಕ್ಕೂಟ ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು - ಪದ್ಮ ವಿಭೂಷಣ ಪುರಸ್ಕೃತ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷರಾಗಿ ಅಬುಧಾಬಿ ಎನ್. ಎಂ. ಸಿ. ಸಮೂಹ ಸಂಸ್ಥೆಯ ಸ್ಥಾಪಕರು ಮತ್ತು ಚೇರ್ಮನ್ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಪರಮ ವಂದನೀಯ ಪೀಟರ್ ಪೌಲ್ ಸಲ್ಡಾನಾ ಧರ್ಮಾಧ್ಯಕ್ಷರು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ, ವಂದನೀಯ ಪೂಜ್ಯ ಎಬಿನೆಜûರ್ ಪ್ರೊಟೆಸ್ಟೆಂಟ್ ಧರ್ಮಗುರುಗಳು - ಸಿ.ಎಸ್.ಐ. ಮಂಗಳೂರು ಪ್ರಾಂತ್ಯ, ರೋನಾಲ್ಡ್ ಕೊಲಾಸೊ, ಮಾನವತಾ ಹಿತೈಷಿ, ಬೆಂಗಳೂರು, ಅಬ್ದುಸ್ಸಲಾಂ ಪುತ್ತಿಗೆ ಮುಸ್ಲಿಂ ಪ್ರವಚನಕಾರರು ಹಾಗೂ ಮೂಡಬಿದರೆ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸ್ಥಾಪಕ ಚೇರ್ಮನ್ ಡಾ| ಮೋಹನ್ ಆಳ್ವ ಭಾಗವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಎ. ಸಿ ಭಂಡಾರಿ, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು,  ಧರ್ಮಪಾಲ ದೇವಾಡಿಗ, ಅಧ್ಯಕ್ಷರು ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು, ಸರ್ವೋತ್ತಮ ಶೆಟ್ಟಿ, ಮುಖ್ಯ ಸಂಘಟಕರು ಸಾಗರೋತ್ತರ ತುಳುವರು ಅತಿಥಿಗಳಾಗಿ ಕರ್ನಾಟಕದಿಂದ ಗಣ್ಯಾತಿ ಗಣ್ಯರು ಹಾಗೂ ಸಾಗರದಾಚೆಯ ಗಲ್ಫ್, ಅಮೇರಿಕಾ, ಆಸ್ಟ್ರೇಲಿಯಾ, ಯು. ಕೆ. ತುಳು ಸಂಘಟನೆಗಳ ಅಧ್ಯಕ್ಷರುಗಳು ಆಗಮಿಸಲಿದ್ದಾರೆ. ಹೊರನಾಡ ತುಳು ಸಂಘಟನೆಗಳಾದ ಮುಂಬೈ, ದೆಹಲಿ, ಬರೋಡ, ನಾಸಿಕ್, ಸಾಂಗ್ಲಿ, ಪುಣೆ, ಚೆನೈ, ಹುಬ್ಬಳ್ಳಿ, ಧಾರವಾಡ, ಬೆಳಗಾಂ ಇತ್ಯಾದಿ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ವಿಶ್ವ ತುಳು ಸಮ್ಮೇಳನದ ಸವಿನೆನಪಿಗಾಗಿ ವಿಶೇಷ ಸ್ಮರಣ ಸಂಚಿಕೆ "ವಿಶ್ವ ತುಳು ಐಸಿರಿ" ಲೋಕಾರ್ಪಣೆ ಗೊಳ್ಳಲಿದೆ. ವಿದ್ವಾಂಸರಿಂದ ತುಳುನಾಡಿನ ಕಲೆ ಸಾಹಿತ್ಯ ಕ್ರೀಡೆ ಜನಪದ, ಸಮಗ್ರ ಮಾಹಿತಿಗಳು. ಸಾಹಿತಿಗಳ ಅರ್ಥಪೂರ್ಣ ಲೇಖನಗಳು ಮತ್ತು ಗಣ್ಯಾತಿ ಗಣ್ಯರ ಶುಭ ಸಂದೇಶಗಳನ್ನು ಒಳಗೊಂಡಿರುತ್ತದೆ. ತುಳು ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು ಗಲ್ಫ್ ರಾಷ್ಟ್ರಗಳಾದ ಮಸ್ಕತ್, ಬಹರೈನ್, ಕತ್ತಾರ್, ಕುವೈತ್, ಸೌದಿ ಅರೇಬಿಯಾ, ಒಮಾನ್ ಮತ್ತು ಯು.ಎ.ಇ.ಯ ಹಲವು ಜಾನಪದ ನೃತ್ಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

ಸತೀಶ್ ಶೆಟ್ಟಿ ಪಟ್ಲ ತಂಡದವರಿಂದ ಯಕ್ಷ ನಾಟ್ಯ ವೈಭವ, ಗಾನ ವೈಭವ, ಹಾಸ್ಯ ವೈಭವ ಮತ್ತು ಯಕ್ಷಗಾನ ತಾಳ ಮದ್ದಳೆ, ತುಳು ರಸ ಮಂಜರಿ ತುಳು ಸಾಹಿತ್ಯ ಗೋಷ್ಠಿ "ತುಳು ಕೋಡೆ-ಇನಿ-ಎಲ್ಲೆ" ದೈವಾರಾಧನೆ, ನಾಗಾರಾಧನೆ ಮತ್ತು ಭೂತಾರಾಧನೆಯ ಬಗ್ಗೆ ಚರ್ಚೆ ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಠಿ, ತುಳು ರಂಗ ಭೂಮಿ ಮತ್ತು ಚಲನ ಚಿತ್ರ ಗೋಷ್ಠಿ ಹೊರನಾಡ ತುಳು ಸಂಘಟನೆಗಳ ಅಧ್ಯಕ್ಷರ ಗೋಷ್ಠಿ ನಡೆಯಲಿದೆ.

"ತುಳುನಾಡ  ಪರ್ಬೊಲು" - ನೃತ್ಯರೂಪಕ - ಚಕ್ರಪಾಣಿ ನೃತ್ಯ ಕಲಾಕೇಂದ್ರ ಮಂಗಳೂರು, "ಬಲೆ ತೆಲಿಪಾಲೆ" ಪ್ರಶಂಸಾ ತಂಡ ಕಾಪು, ಮತ್ತು ಮಿಜಾರು ತಂಡ ಮಂಗಳೂರು, ಯಕ್ಷಗಾನ-ಯಕ್ಷಮಿತ್ರರು ಮತ್ತು ಪಿಲಿನಲಿಕೆ ದುಬಾಯಿ ಕಲಾತಂಡದವರಿಂದ, "ಎಳುವೆರ್ ದೆಯ್ಯಾರ್" - ತುಳು ನೃತ್ಯರೂಪಕ- ನಾಟ್ಯನಿಕೇತನ ಉಳ್ಳಾಲ್ ಮೋಹನ್ ಕುಮಾರ್ ತಂಡದವರಿಂದ, "ಸತ್ಯನ ಪುರಾತ ಸಿರಿ" ತುಳು ನೃತ್ಯ ರೂಪಕ ಸನಾತನ ನಾಟ್ಯಾಲಯ ಚಂದ್ರಶೇಖರ ಶೆಟ್ಟಿ ಹಾಗೂ ದುಬಾಯಿಯ ಗಮ್ಮತ್ ಕಲಾವಿದರು ಮತ್ತು ವಿವಿಧ ಕಲಾವಿದರ ತಂಡದಿಂದ ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ತುಳುನಾಡನ್ನು ಪ್ರತಿಬಿಂಭಿಸುವ ವಸ್ತುಪ್ರದರ್ಶನ ಇತ್ಯಾದಿ ಹಲವಾರು ವೈವಿಧ್ಯಮಯ ತುಳು ನಾಡಿನ ಸಾಂಸ್ಕೃತಿಕ ಕಲಾವೈಭವ ಅನಾವರಣಗೊಳ್ಳಲಿದೆ.

ಈ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಪ್ರಮುಖ ಸಂಘಟಕರಾದ ಸರ್ವೋತ್ತಮ್ ಶೆಟ್ಟಿ, ಶೋಧನ್ ಪ್ರಸಾದ್, ಬಿ.ಕೆ. ಗಣೇಶ ರೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Pages