ಹೆತ್ತವರ ಕಳೆದುಕೊಂಡ ಬಂಟ ಬಾಲಕಿಯ ದತ್ತು ತೆಗೆದುಕೊಂಡು ನೆರವದ ಜಾಗತಿಕ ಬಂಟರ ಸಂಘಗಳ ಒಕ್ಕೂಟ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹೆತ್ತವರ ಕಳೆದುಕೊಂಡ ಬಂಟ ಬಾಲಕಿಯ ದತ್ತು ತೆಗೆದುಕೊಂಡು ನೆರವದ ಜಾಗತಿಕ ಬಂಟರ ಸಂಘಗಳ ಒಕ್ಕೂಟ

Share This
BUNTS NEWS, ತಲಪಾಡಿ: ಇತ್ತಿಚೇಗೆ ಹೆತ್ತವರ ಅಕಾಲಿಕ ಮರಣದಿಂದ ತಬ್ಬಲಿಯಾಗಿರುವ ತಲಪಾಡಿ ಗ್ರಾಮದ ಬಾಲಕಿ ಪುರಾಗ್ ರೈ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದತ್ತು ಪಡೆಯುವ ಮೂಲಕ ನೆರವಾಗಿದೆ.
ಈ ಹಿನ್ನೆಲೆಯಲ್ಲಿ ತಲಪಾಡಿ ಗ್ರಾಮದಲ್ಲಿರುವ ಪುರಾಗ್ ರೈ ಮನೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವಾ, ಸೋಮೇಶ್ವರ ಬಂಟರ ಸಂಘದ ಚಂದ್ರ ಶೇಖರ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಯ ನಾಯಕ್, ಶ್ರೀ ಗಂಗಾಧರ ಶೆಟ್ಟಿ, ಸೋಮೇಶ್ವರ ಬಂಟರ ಸಂಘದ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ, ರಾಜಾರಾಮ ಅಡ್ಯಂತಾಯ, ಯಶು ಪಕ್ಕಳ, ಪ್ರದೀಪ್ ಕಿಲ್ಲೆ ಹಾಗೂ ಗೋಪಾಲಕೃಷ್ಣ ಮೇಲಾಂಟ ಭೇಟಿ ನೀಡಿ ಬಾಲಕಿಯ ಕುಟುಂಬದ ಮಾಹಿತಿಯನ್ನು ಪಡೆದರು.

ಬಾಲಕಿಯ ತಂದೆ ತಾಯಿಯವರು ಅಕಾಲಿಕವಾಗಿ ಮರಣ ಪಟ್ಟ ಹಿನ್ನೆಲೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಮನದಾಳದ ಇಚ್ಛೆಯಂತೆ ಹಾಗೂ ಒಕ್ಕೂಟದ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಬಾಲಕಿಯನ್ನು ದತ್ತು ತೆಗೆದುಕೊಂಡು ಅವಳ ಮುಂದಿನ ಜೀವನ ಹಸನಾಗಿಸುವ ಪ್ರಸ್ತಾವನೆಯನ್ನು ಮಾಡಲಾಗಿದೆ . ಬಾಲಕಿಯು ಪ್ರಸ್ತುತ ಎಸ್’ಎಸ್ಎಲ್ಸಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಶೇಕಡಾ 92 -94% ಅಂಕಗಳನ್ನು ಪಡೆಯುತ್ತಿದ್ದು ಇತರ ವಿಷಯಗಳಲ್ಲೂ ಪ್ರತಿಭಾನ್ವಿತಳಾಗಿದ್ದಾಳೆ. (ಚಿತ್ರ: ಯಶು ಪಕ್ಕಳ)

Pages