ದುಬೈ ‘ವಿಶ್ವ ತುಳು ಸಮ್ಮೇಳನ’ಕ್ಕೆ ಹರಿದು ಬಂದ ಜನಸಾಗರ: ಮರಳುಗಾಡಿನ ನಾಡಲ್ಲಿ ತುಳುವರ ಐತಿಹಾಸಿಕ ಸಂಭ್ರಮ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದುಬೈ ‘ವಿಶ್ವ ತುಳು ಸಮ್ಮೇಳನ’ಕ್ಕೆ ಹರಿದು ಬಂದ ಜನಸಾಗರ: ಮರಳುಗಾಡಿನ ನಾಡಲ್ಲಿ ತುಳುವರ ಐತಿಹಾಸಿಕ ಸಂಭ್ರಮ

Share This
BUNTS NEWS, ಯುಎಇ: ಕೊಲ್ಲಿ ರಾಷ್ಟ್ರದಲ್ಲಿನ ತುಳುವರ ಒಕ್ಕೂಟ, ಸಾಗರೋತ್ತರ ತುಳುವರ ಕೂಟದ ಮುಖ್ಯಸ್ಥ ಹಾಗೂ ದುಬಾಯಿ ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮತ್ತು ಬಳಗದ ಸಾಂಘಿಕತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲಭಾರತ ತುಳು ಒಕ್ಕೂಟ ಇವುಗಳ ಸಹಯೋಗದ 'ವಿಶ್ವ ತುಳು ಸಮ್ಮೇಳನ ದುಬಾಯಿ'ಗೆ ನ.23ರಂದು ಜನ ಸಾಗರವೇ ಸೇರುವ ಮೂಲಕ ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾಯಿತು.
ಸಮ್ಮೇಳನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾI ಡಿ.ವಿರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತುಳುವರು ಶಾಂತಿಪ್ರೀಯರಾಗಿದ್ದು ಪತ್ರಿ ಕಾರ್ಯದಲ್ಲೂ ಮುಂದಿರುತ್ತಾರೆ. ಇದಕ್ಕೆ ಗಲ್ಫ್ ರಾಷ್ಟ್ರದಲ್ಲಿ ದುಡಿದು ಸಾಧನೆ ಮಾಡಿರುವ ತುಳುವರು ಸಾಕ್ಷಿಯಾಗಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಮೋದಿಯವರಲ್ಲಿ ಮನವಿ ಮಾಡಿದ್ದು ವಿಶ್ವ ಸಮ್ಮೇಳನದ ಮೂಲಕ ಕೇಂದ್ರ ಸರ್ಕಾರಕ್ಕೆ ಮತ್ತೋಮ್ಮೆ ಮನವಿ ಮಾಡುತ್ತಿರುವುದಾಗಿ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗಮನ ಸೆಳೆದ ದುಬೈ ಸಚಿವ ಶೇಖ್ ನಹನ್ ಮುಬಾರಕ್ ಮಾತನಾಡಿ, ತುಳುನಾಡು ಹಲವು ಸಂಸ್ಕೃತಿಯ ನಾಡು ಎನ್ನುವುದಕ್ಕೆ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ವಿಶ್ವದೆಲ್ಲೆಡೆ ಪಸರಿಸಿರುವ ತುಳುವರು ದುಬೈಗೂ ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವ ತುಳು ಸಮ್ಮೇಳನವನ್ನು ದುಬೈಯಲ್ಲಿ ಮಾಡುವ ಮೂಲಕ ಭಾರತ-ದುಬೈ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ ಎಂದು ತುಳು ಭಾಷೆಯಲ್ಲಿ ‘ವಿಶ್ವ ತುಳು ಸಮ್ಮೇಳನೊಗು ಶುಭಾಶಯೊ’ ಎನ್ನುತ ಶುಭ ಹಾರೈಸಿದರು.
ವಿಶ್ವ ತುಳು ಸಮ್ಮೇಳನ ದುಬಾಯಿಯ ಸವಿನೆನಪಿಗಾಗಿ ಲೇಖಕ ಗಣೇಶ್ ರೈ ಸಾರಥ್ಯದಲ್ಲಿ ಮೂಡಿಬಂದಿರುವವಿಶ್ವ ತುಳು ಐಸಿರಿಸ್ಮರಣ ಸಂಚಿಕೆಯನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ಸಮ್ಮೇಳನದಲ್ಲಿ ತುಳುನಾಡ ಪಿಲಿನಲಿಕೆ, ಪ್ರಶಂಸಾ ಹಾಗೂ ಉಮೇಶ್ ಮಿಜಾರು ತಂಡದವರ ಬಲೇ ತೆಲಿಪಾಲೆ ಕಾರ್ಯಕ್ರಮ, ಗಲ್ಫ್ರಾಷ್ಟ್ರದ 6 ತಂಡಗಳಿಂದ ಗುಂಪು ಜನಪದ ನಲಿಕೆ ಸ್ಪರ್ಧೆ. ತುಳುನಾಡ ಪರ್ಬೊಲು ನೃತ್ಯರೂಪಕ, ಯಕ್ಷ ಮಿತ್ರರು ದುಬೈ ತಂಡದ ತುಳು ಯಕ್ಷ ಗಾನ 'ಜಾಂಬವತಿ ಕಲ್ಯಾಣ', ಸತೀಶ್ಶೆಟ್ಟಿ ಪಟ್ಲ ಮತ್ತು ತಂಡದಿಂದ ಯಕ್ಷ ಗಾನ ನಾಟ್ಯ ವೈಭವ ನಡೆಯಿತು.

ಸಮ್ಮೇಳನದ ಅಧ್ಯಕ್ಷತೆಯನ್ನು ಪದ್ಮಶ್ರೀ ಡಾ.ಬಿ.ಆರ್. ಶೆಟ್ಟಿ ವಹಿಸಿದ್ದರು. . ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಸಚಿವೆ ಜಯಮಾಲಾ, ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜಾ, ಪ್ರೊಟೆಸ್ಟಂಟ್ ಧರ್ಮಗುರು ಎಬಿನೇರ್ ಜತ್ತನ್ನ, ಮಾಧ್ಯಮ ಕಮ್ಯುನಿಕೇಶನ್ ನಿರ್ದೇಶಕ ಅಬ್ದುಲ್ ಸಲಾಂ ಪುತ್ತಿಗೆ, ಉದ್ಯಮಿ ರೊನಾಲ್ಡೊ ಕುಲಾಸೊ, ಶಾ ಸಕ ಉಮಾನಾಥ ಕೋಟ್ಯಾನ್, ಕೇಂದ್ರದ ಮಾಜಿ  ಸಚಿವ ವೀರಪ್ಪ ಮೊಯ್ಲಿ, ಆಳ್ವಾಸ್ ಶಿಕ್ಷಣ  ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ, ತುಳು ಒಕ್ಕೂಟದ ಅಧ್ಯಕ್ಷ ಯು. ಧರ್ಮಪಾಲ ದೇವಾಡಿಗ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ .ಸಿ. ಭಂಡಾರಿ , ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಸುಜಾತ್ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಸ್ವಾಗತಿಸಿದರು. ಭಾಸ್ಕರ್ ರೈ ಕುಕ್ಕವಳ್ಳಿ, ಕದ್ರಿ ನವನೀತ್ ಶೆಟ್ಟಿ, ಸಾಯಿಲ್ ರೈ, ಪ್ರಿಯಾ ಹರೀಶ್ ಶೆಟ್ಟಿ, ನವೀನ್ ಶೆಟ್ಟಿ ಯೆಡ್ಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

Pages