ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯ ಯೋಜನೆ : ಶಮರಾಯ ಪೂಜಾರಿ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ - BUNTS NEWS WORLD

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯ ಯೋಜನೆ : ಶಮರಾಯ ಪೂಜಾರಿ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

Share This
BUNTS NEWS, ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದದ ವತಿಯಿಂದ ಎಲ್ಲಾ ಸಮಾಜದ ಬಡವರಿಗೆ ಮನೆ ನೀಡುವ ‘ಆಶ್ರಯ ಯೋಜನೆ’ಯಡಿಯಲ್ಲಿ ಶಮರಾಯ ಪೂಜಾರಿ ಅವರ ನೂತನ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಕಾರ್ಯಕ್ರಮ ಕರ್ನಿರೆಯಲ್ಲಿ ನಡೆಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಶಮರಾಯ ಪೂಜಾರಿ ಅವರಿಗೆ ನಿರ್ಮಿಸಿ ಕೊಡುವ ನೂತನ ಮನೆ ನಿರ್ಮಾಣದ ಭೂಮಿ ಪೂಜೆಯನ್ನು ನೆರೆವೆರಿಸಿದರು.

ಈ ಸಂದರ್ಭ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಂಡ್ಕೂರು ರತ್ನಾಕರ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಗುಣಪಾಲ್ ಶೆಟ್ಟಿ ಐಕಳ, ಕೊಲ್ಲಾಡಿ ಬಾಲಕೃಷ್ಣ ರೈ ಮತ್ತಿತರರು ಉಪಸ್ಥಿತರಿದ್ದರು.

Pages