ನ.23ರಂದು ಫರಂಗಿಪೇಟೆ ಬಂಟರ ಸಂಘದಿಂದ ನಡೆಯಲಿದೆ ಅಶಕ್ತ “ಬಂಟ ವಧುವಿನ ಮದುವೆ” - BUNTS NEWS WORLD

ನ.23ರಂದು ಫರಂಗಿಪೇಟೆ ಬಂಟರ ಸಂಘದಿಂದ ನಡೆಯಲಿದೆ ಅಶಕ್ತ “ಬಂಟ ವಧುವಿನ ಮದುವೆ”

Share This
BUNTS NEWS, ಬಂಟ್ವಾಳ: ಫರಂಗಿಪೇಟೆ ಬಂಟರ ಸಂಘದಿಂದ ಬಂಟ ಸಮಾಜದ ಬೆಂಜನಪದವಿನ  ದಿ. ಸಂಜೀವ ಶೆಟ್ಟಿ  ಮತ್ತು ಸುಜಾತಾ ಶೆಟ್ಟಿ ದಂಪತಿಯ ಮಗಳು  ರೂಪಲತಾ ಶೆಟ್ಟಿ ಅವರ ವಿವಾಹ ನ.23ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಫರಂಗಿಪೇಟೆ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ಇವರ ನೇತೃತ್ವ ದಲ್ಲಿ ರೂಪಲತಾ ಶೆಟ್ಟಿ ಅವರ ನಿಶ್ಚಿತಾರ್ಥವು  ಬೆಂಜನಪದವಿನ ಅವರ ನಿವಾಸದಲ್ಲಿ ನಡೆಯಿತು.

ಸಮಾರಂಭದಲ್ಲಿ ಬಂಟರ ಸಂಘ ಬಂಟ್ವಾಳ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಪ್ರಸಾದ ರೈ, ಗೌರವಾಧ್ಯಕ್ಷರಾದ ವಿಠ್ಠಲ್ ಶೆಟ್ಟಿ ನೀರೊಲ್ಬೆ,  ಗೌರವ ಸಲಹೆಗಾರ ಸದಾಶಿವ ಶೆಟ್ಟಿ ಕೊಟ್ಟಿಂಜ, ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ನುಲಿಯಾಲ್ ಗುತ್ತು, ಹಿರಿಯರಾದ ಹರಿಣಾಕ್ಷಿ ಆರ್. ಶೆಟ್ಟಿ  ಕೊಳಂಬೆ, ವಸಂತ ಶೆಟ್ಟಿ, ಮಹಿಳಾ ಘಟಕದ  ಕಾರ್ಯದರ್ಶಿ ಶೈಲಜಾ ಪಿ. ಶೆಟ್ಟಿ ಕೊಟ್ಟಿಂಜ  ಹಾಗೂ ವಧು-ವರರ ಕುಟುಂಬದ  ಸದಸ್ಯರು ಉಪಸ್ಥಿತರಿದ್ದರು.

ರೂಪಲತಾ ಶೆಟ್ಟಿ ಅವರ ವಿವಾಹವು ನ.23 ಬುಧವಾರ ಬಂಟವಾಳ ಬಂಟರ ಭವನದಲ್ಲಿ ಫರಂಗಿಪೇಟೆ ಬಂಟರ ಸಂಘದ ವತಿಯಿಂದ ಬಂಟ್ವಾಳ ತಾಲೂಕು ಮಹಿಳಾ ಘಟಕ ಸಹಯೋಗದೊಂದಿಗೆ  ನಡೆಯಲಿದೆ.

Pages