BUNTS NEWS, ಸುರತ್ಕಲ್: ಸುರತ್ಕಲ್ ಬಂಟರ ಸಂಘದ ಮಹಿಳಾ
ವೇದಿಕೆಯ ಅಧ್ಯಕ್ಷರಾಗಿ ಬೇಬಿ ಶೆಟ್ಟಿ ಕುಡುಂಬೂರು
ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸುರತ್ಕಲ್ ಬಂಟರ ಭವನದಲ್ಲಿ ಮಹಿಳಾ
ವೇದಿಕೆಯ ಸಭೆಯಲ್ಲಿ ನಡೆದ 2018-20ರ
ಸಾಲಿನ ನೂತನ ಮಹಿಳಾ ವೇದಿಕೆಯ
ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ
ಸುಜಾತ ಶೆಟ್ಟಿ ಹೊಸಬೆಟ್ಟು, ಕಾರ್ಯದರ್ಶಿಯಾಗಿ
ಚಿತ್ರಾ ಜೆ. ಶೆಟ್ಟಿ, ಜತೆ
ಕಾರ್ಯದರ್ಶಿಯಾಗಿ ರೇಖಾ ಶೆಟ್ಟಿ, ಸಂಘಟನಾ
ಕಾರ್ಯದಶಿಯಾಗಿ ಕೇಸರಿ ಪೂಂಜಾ ಹೊಸಬೆಟ್ಟು,
ಕೋಶಾಧಿಕಾರಿಯಾಗಿ ವಜ್ರಾಕ್ಷಿ ಶೆಟ್ಟಿ ಮಧ್ಯ, ಕ್ರೀಡಾ
ಕಾರ್ಯದರ್ಶಿಯಾಗಿ ವೇದಾ ಎನ್ ಶೆಟ್ಟಿ,
ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಚಂದ್ರಕಲಾ
ರೈ ಚೇಳಾೈರ್ ಅವಿರೋಧವಾಗಿ ಆಯ್ಕೆಯಾದರು.
ಸಭೆಯಲ್ಲಿ
ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ
ಶೆಟ್ಟಿ, ಕಾರ್ಯದರ್ಶಿ ವಿಜಯಭಾರತಿ ಶೆಟ್ಟಿ ಉಪಸ್ಥಿತರಿದ್ದರು.