BUNTS
NEWS, ದುಬೈ: ಮಾರ್ಷಲ್ ಆರ್ಟ್ಸ್ನ ಗುರು ಎಂದೇ ಪ್ರಸಿದ್ಧಿಯನ್ನು ಪಡೆದಿರುವ
ಅಂತರಾಷ್ಟ್ರೀಯ ಖ್ಯಾತಿಯ ಚೀತಾ ಯಜ್ಞೇಶ್ ಶೆಟ್ಟಿ
ನಿರ್ದೇಶನದ 'HE Is Back' ಹಾಲಿವುಡ್ ಸಿನಿಮಾಕ್ಕೆ ಡಾ.ಬಿ.ಆರ್ ಶೆಟ್ಟಿ ಕ್ಯಾಮೇರಾ ಚಾಲನೆ
ಮಾಡುವ ಮೂಲಕ ಶುಭ ಹಾರೈಸಿದ್ದಾರೆ.
ದುಬೈಯ ಬುರ್ಜ್ ಕಾಲಿಫಾದಲ್ಲಿ
ಇತ್ತಿಚೇಗೆ ನಡೆದ ಸಮಾರಂಭದಲ್ಲಿ ಬಹುಭಾಷಾ ಚಿತ್ರ
ನಿರ್ಮಾಪಕ ರಾಕ್’ ಲೈನ್ ವೆಂಕಟೇಶ್ ಅವರು ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಸುರೇಶ್ ಬಾಬು ಮಾಲ್ಗೆ ಹಾಗೂ ಸುರೇಶ್ ಶರ್ಮಾ ‘ಹಿ ಇಸ್ ಬ್ಯಾಕ್’ ಸಿನಿಮಾದ ನಿರ್ಮಾಪಕರಾಗಿದ್ದಾರೆ.
ಅಮರ್’ಜಿತ್ ಶೆಟ್ಟಿ ಸಹ ನಿರ್ಮಾಪಕರಾಗಿ ಹಾಗೂ ವಿಲಿಯಂ ಬಾಂಡ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಚಿತ್ರವು ಹಾಲಿವುಡ್
ದಂತ ಕಥೆ, ಕುಂಗ್ ಫೂ ಮಾಸ್ಟರ್ ಬ್ರೂಸ್ಲಿ ಅವರಿಗೆ ಗೌರವಸೂಚಕವಾಗಿ ನಿರ್ಮಾಣವಾಗುತ್ತಿದ್ದು ಸಂಪೂರ್ಣ
ಮಾರ್ಷಲ್ ಆರ್ಟ್ ಒಳಗೊಂಡಿದೆ. ಸಿನಿಮಾ ಚಿತ್ರಿಕರಣವು ಕಾಂಬೋಡಿಯಾ, ಥಾಯ್ಲಾಂಡ್, ರಷ್ಯಾ, ಅಮೇರಿಕಾ
ಹಾಗೂ ಇನ್ನಿತರ ಪ್ರಮುಖ ಕಡೆಗಳಲ್ಲಿ ನಡೆಯಲಿದೆ.
ಚಿತ್ರದ ನಾಯಕ ಆಫ್ಗಾನ್
ಬ್ರೂಸ್ಲಿ ಎಂದೇ ಖ್ಯಾತಿ ಪಡೆದಿರುವ ಅಬ್ ಲೀ (ಅಬ್ಬಾರ್ ಆಲಿಝಾದ) ಹಾಲಿವುಡ್ ದಂತ ಕಥೆ ಕುಂಗ್ ಫೂ
ಮಾಸ್ಟರ್ ಬ್ರೂಸ್ಲಿ ಅವರಂತೆ ಹೋಲಿಕೆಯಿದ್ದು ಈಗಾಗಲೇ ವಿಶ್ವದೆಲ್ಲೆಡೆ ಗಮನ ಸೆಳೆದಿದ್ದಾರೆ.