ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಎನ್.ಎಮ್ ಶೆಟ್ಟಿ ದಂಪತಿಗೆ ಸನ್ಮಾನ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಎನ್.ಎಮ್ ಶೆಟ್ಟಿ ದಂಪತಿಗೆ ಸನ್ಮಾನ

Share This
BUNTS NEWS, ದೆಹಲಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ಎನ್. ಎಮ್ ಶೆಟ್ಟಿ ಮತ್ತು ಅವರ ಧರ್ಮ ಪತ್ನಿ ನಿರ್ಮಲಾ ಎಮ್ ಶೆಟ್ಚಿಯವರನ್ನು ಅವರ ದೆಹಲಿಯ ನಿವಾಸದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಪೂರ್ವ ಸೂಚನೆಯಂತೆ  ಒಕ್ಕೂಟದ ಪೋಷಕ ಸದಸ್ಯರಾದ ಶಶಿಧರ್ ಶೆಟ್ಟಿ ಬರೋಡ ಇವರು ಎನ್. ಎಮ್ ಶೆಟ್ಟಿ ದಂಪತಿಗಳಿಗೆ ಪುಷ್ಪ ಗುಚ್ಛ ನೀಡಿ, ಶಾಲು ಹೊದಿಸಿ, ಗೌರವಿಸಿದರು.

ಸನ್ಮಾನದ ಬಳಿಕ ಮಾತನಾಡಿದ  ಎನ್.ಎಮ್ ಶೆಟ್ಟಿಯವರು, ಕಳೆದ ಸೆ.9ರಂದು ಉಡುಪಿಯಲ್ಲಿ ಜರುಗಿದ ವಿಶ್ವ ಬಂಟರ ಸಮ್ಮಿಲನ ಯಶಸ್ವಿಗೊಂಡ ಬಗ್ಗೆ ಕೇಳಿ ತಿಳಿದು ಹರ್ಷವನ್ನು ವ್ಯಕ್ತಪಡಿಸಿ ಒಕ್ಕೂಟವು ಕಳೆದ 6 ತಿಂಗಳಲ್ಲಿ ನಡೆಸಿದ ಮತ್ತು ನಡೆಸುತ್ತಿರುವ ಸಮಾಜ ಸೇವಾ ಕಾರ್ಯಗಳ ಬಗ್ಗೆ ಹಾಗೂ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂದರ್ಭದಲ್ಲಿ ವಿಶ್ವ ಬಂಟರ ಸಮ್ಮಿಲನ -2018 ಸಾಂಸ್ಕೃತಿಕ ಸಮಿತಿ ಸಂಚಾಲಕ ಕರ್ನೂರು ಮೋಹನ್ ರೈ ಹಾಗೂ ಎನ್.ಎಮ್ ಶೆಟ್ಟಿಯವರ ಅಳಿಯ ಶಿವಪ್ರಸಾದ್ ಶೆಟ್ಟಿಯವರು ಉಪಸ್ಥಿತರಿದ್ದರು.

Pages