BUNTS NEWS, ಶಾರ್ಜಾ: ಕರ್ನಾಟಕ ರಾಜ್ಯೋತ್ಸವ ಸಮಾರಂಭ,
ಶಾರ್ಜಾ ಕರ್ನಾಟಕ ಸಂಘದ 16ನೇ
ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ
ಪ್ರದಾನ ಸಮಾರಂಭ ನ.16ರಂದು
ಸಂಜೆ 3 ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್
ಬೃಹತ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ವೈವಿಧ್ಯಮಯ
ನೃತ್ಯ, ಹಾಸ್ಯಪ್ರಹಸನ ಹಾಗೂ ಪ್ರಖ್ಯಾತ ಗಾಯಕರ
ಸಂಗೀತ ರಸಮಂಜರಿ ವಿಶೇಷ ಆಕರ್ಷಣೆಯಾಗಿ
ಸರ್ವರ ಮನಸೆಳೆಯಲಿದೆ.
ಕಾರ್ಯಕ್ರಮಕ್ಕೆ
ಪ್ರವೇಶ ಉಚಿತವಾಗಿದ್ದು ಅಪಾರ ಸಂಖ್ಯೆಯಲ್ಲಿ ಅಭಿಮಾನಿ
ಕನ್ನಡಿಗರು ಆಗಮಿಸಿ ಕನ್ನಡ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಲು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ
ಪರವಾಗಿ ಶಾರ್ಜಾ ಕರ್ನಾಟಕ ಸಂಘದ
ಅಧ್ಯಕ್ಷರಾದ ಆನಂದ್ ಬೈಲೂರ್ ರವರು
ಮಾಧ್ಯಮದ ಮೂಲಕ ಆಹ್ವಾನಿಸಿದ್ದಾರೆ.