BUNTS NEWS, ಸುರತ್ಕಲ್: ನಾನು ಜಾತಿವಾದಿಯಲ್ಲ, ಬಂಟ, ಬಿಲ್ಲವ, ಮೋಗವೀರರೊಂದಿಗೆ
ಉತ್ತಮ ಆತ್ಮೀಯತೆಯಿದ್ದು ಯಾವ ಜಾತಿ ಕಾರ್ಯಕ್ರಮಕ್ಕೆ ಕರೆದರೂ ಹೋಗುವುದಾಗಿ ಸುರತ್ಕಲ್ ವಿಧಾನಸಭಾ
ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದರು.
ಅವರು ಭಾನುವಾರ ಸುರತ್ಕಲ್
ಬಂಟರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಎಲ್ಲರ ಆರ್ಶಿವಾದ ಪಡೆದ ರಾಜಕಾರಣಿಗಳು ತನ್ನ ಜಾತಿಯ
ಕಾರ್ಯಕ್ರಮಕ್ಕೆ ಕರೆದಾಗ ಹೋದರೆ ಜಾತಿವಾದಿಯೆಂದು ಕರೆಯಬಹುದೆಂಬ ಭಯದಲ್ಲಿರುತ್ತಾರೆ. ಆದರೆ ನನಗೆ
ಅಂತಹ ಭಾವನೆ ಇನ್ನೂ ಮನಸ್ಸಲ್ಲಿ ಬಂದಿಲ್ಲ. ಯಾವ ಜಾತಿಯವರು ಕರೆದರೂ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ
ಎಂದರು.
ಉಲ್ಲಾಸ್ ಶೆಟ್ಟಿ
ಹಾಗೂ ಅವರ ತಂಡ ಸುರತ್ಕಲ್ ಬಂಟರ ಸಂಘದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಂಘಕ್ಕೆ ಹೆಸರು ತಂದಿದ್ದಾರೆ.
ಅದೇ ರೀತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಧಾಕರ ಪೂಂಜಾರವರು ಸಂಘವನ್ನು ಉತ್ತಮವಾಗಿ ನಡೆಸಲು
ದೇವರು ಶಕ್ತಿ ನೀಡಲೆಂದು ಶುಭ ಹಾರೈಸಿದರು. https://www.youtube.com/watch?v=w7K2TGBty8Y