ಆಳ್ವಾಸ್ ವಿದ್ಯಾರ್ಥಿಸಿರಿ 2018 : ಸನ್ನಿಧಿ ಟಿ. ರೈ ಪೆರ್ಲ ಅಧ್ಯಕ್ಷೆ - BUNTS NEWS WORLD

 

ಆಳ್ವಾಸ್ ವಿದ್ಯಾರ್ಥಿಸಿರಿ 2018 : ಸನ್ನಿಧಿ ಟಿ. ರೈ ಪೆರ್ಲ ಅಧ್ಯಕ್ಷೆ

Share This
BUNTS NEWS, ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ನ.15ರಂದು ನಡೆಯಲಿರುವ ವಿದ್ಯಾರ್ಥಿ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ’ಯ ಅಧ್ಯಕ್ಷರಾಗಿ ಸನ್ನಿಧಿ ಟಿ. ರೈ ಪೆರ್ಲ ಆಯ್ಕೆಯಾಗಿದ್ದಾರೆ.

ಕಾಸರಗೋಡು ವಿದ್ಯಾನಗರದ ಚಿನ್ಮಯ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಬಹುಮುಖ ಪ್ರತಿಭೆ ಸನ್ನಿಧಿ ಟಿ.ರೈ ಪೆರ್ಲ ಕಳೆದ ‘ಆಳ್ವಾಸ್ ವಿದ್ಯಾರ್ಥಿಸಿರಿ 2017’ರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಸನ್ನಿಧಿ ಟಿ. ರೈ ಪೆರ್ಲ ಅವರ ಪರಿಚಯ: ಸನ್ನಿಧಿ ಟಿ.ರೈ ಪೆರ್ಲ ಇವರು ಕಾಸರಗೋಡಿನ ಪೆರ್ಲ ತಾರಾನಾಥ ರೈ ಮತ್ತು ರಾಜಶ್ರೀ ಅವರ ಪುತ್ರಿ. ಬಹುಮುಖ ಪ್ರತಿಭಾನ್ವಿತೆ. ಯಕ್ಷಗಾನ ಭಾಗವತಿಕೆ, ಶಾಸ್ತ್ರೀಯ, ಸುಗಮ ಸಂಗೀತ, ಭರತನಾಟ್ಯ, ಯೋಗ, ಕರಾಟೆ, ಕೀಬೋರ್ಡ್, ವಯಲಿನ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಇವರು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಕವಿತೆಗಳನ್ನು ಬರೆಯುತ್ತಾರೆ. ‘ಚಿಲಿಪಿಲಿ ಚಿತ್ತಾರ’ ಕನ್ನಡ ಕವನ ಸಂಕಲನ ಪ್ರಕಟಗೊಂಡಿದೆ. ಶೇಡ್ಸ್ ಎಂಬ ಇಂಗ್ಲಿಷ್ ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಂಡಿದೆ. ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ, ಬಾಂಧವ್ಯ ಪುರಸ್ಕಾರ, ಕೇರಳ ತುಳು ಅಕಾಡೆಮಿ ಸನ್ಮಾನ, ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ, ಒಡಿಯೂರಿನ ಪ್ರತಿಭಾ ಪುರಸ್ಕಾರಗಳು ಬಂದಿವೆ.

Pages