BUNTS NEWS, ಸುರತ್ಕಲ್: ಬಂಟರ ಸಂಘ ಸುರತ್ಕಲ್ ಇದರ 2018-20ರ ಸಾಲಿನ
ನೂತನ ಅಧ್ಯಕ್ಷರಾಗಿ ಸುಧಾಕರ ಎಸ್. ಪೂಂಜ ಹೊಸಬೆಟ್ಟು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುರತ್ಕಲ್ ಬಂಟರಭವನದಲ್ಲಿ ನೂತನ ನಿರ್ದೇಶಕ ಸಭೆ ಜರಗಿ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ
ಸಮಿತಿ ಸದಸ್ಯರ ಆಯ್ಕೆ ನಡೆದಿತ್ತು. ಉಪಾಧ್ಯಕ್ಷರಾಗಿ ನವೀನ್ ಶೆಟ್ಟಿ ಪಡ್ರೆ, ಪ್ರಧಾನ ಕಾರ್ಯದರ್ಶಿಯಾಗಿ
ಲೋಕಯ್ಯ ಶೆಟ್ಟಿ ಮುಂಚೂರು, ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿಯಾಗಿ
ರತ್ನಾಕರ ಶೆಟ್ಟಿ ಸುರತ್ಕಲ್ , ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ ಶೆಟ್ಟಿ ಕುಡುಂಬೂರು ಅವಿರೋಧವಾಗಿ
ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ
ಸದಸ್ಯರಾಗಿ ಡಾ. ಮಂಜಯ್ಯ ಶೆಟ್ಟಿ ಸುರತ್ಕಲ್, ಮಹಾಬಲ
ರೈ ಮುಕ್ಕ, ಜಗನ್ನಾಥ ಶೆಟ್ಟಿ ಬಾಳ, ದೇವೇಂದ್ರ ಶೆಟ್ಟಿ ಕಟ್ಲ, ಭವ್ಯಾ ಎ. ಶೆಟ್ಟಿ ಸುರತ್ಕಲ್. ಸುಜಾತಾ
ಎಸ್. ಶೆಟ್ಟಿ ಕಾಟಿಪಲ್ಲ, ಗಂಗಾಧ ಶೆಟ್ಟಿ ತಡಂಬೈಲ್, ಶ್ರೀಧರ ಶೆಟ್ಟಿ ಮಧ್ಯ. ಸುಧಾಕರ ಶೆಟ್ಟಿ ಕೃಷ್ಣಾಪುರ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣಾ ಪ್ರಕ್ರಿಯೆ
ಸಭೆಯಲ್ಲಿ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ
ಪೆರ್ಮುದೆ, ಪದಾಧಿಕಾರಿಗಳಾದ ಸುಧಾಕರ ಪೂಂಜ, ಸೀತಾರಾಮರೈ, ಪ್ರವೀಣ್ ಶೆಟ್ಟಿ, ಜಯರಾಮಶೆಟ್ಟಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಉಪಸ್ಥಿತರಿದ್ದರು.
ಚುನಾವಣಾಧಿಕಾರಿಯಾಗಿ ದಿವಾಕರ ಸಾಮಾನಿ ಚೇಳಾೈರ್‍ಗುತ್ತು ಕರ್ತವ್ಯ ನಿರ್ವಹಿಸಿದ್ದರು.