ಮಂಗಳೂರು: ಶಕ್ತಿನಗರದ ಶಕ್ತಿ ವಸತಿಯುತ ಶಾಲೆ, ಶಕ್ತಿ ಪ.ಪೂ.
ಕಾಲೇಜು ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಹಯೋಗದೊಂದಿಗೆ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ನೇತೃತ್ವದಲ್ಲಿ
ದೇವಸ್ಥಾನದ ಸಭಾಂಗಣದಲ್ಲಿ ಉಚಿತ ಯೋಗ ಶಿಬಿರದ ಉದ್ಘಾಟನೆಯು ನಡೆಯಿತು.
ಶಿಬಿರವನ್ನು ಎಸ್.ಡಿ.ಎಮ್.
ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಸ್ಥಾಪಕ ನಿರ್ದೇಶಕರಾದ ಡಾ. ದೇವರಾಜ್ ಉದ್ಘಾಟಿಸಿದರು. ನಂತರ ಸಭೆಯನ್ನುದ್ಧೇಶಿಸಿ
ಮಾತನಾಡಿದ ಅವರು, ಯೋಗದಿಂದ ಸಂತೋಷ, ಚೈತನ್ಯ, ಬುದ್ದಿ, ಶಕ್ತಿ,ಆಧ್ಯಾತ್ಮಿಕ ಚಿಂತನೆ ಲಭಿಸುತ್ತದೆ.
ಆತ್ಮ ಮತ್ತು ಪರಮಾತ್ಮನ ಕೊಂಡಿಯಾಗಿದೆ ಯೋಗ. ಯೋಗವು ಅಂತರ್ಶಶಕ್ತಿ ಮತ್ತು ಬಾಹ್ಯ ಶಕ್ತಿಗೆ ಚೈತನ್ಯವನ್ನು
ನೀಡುವುದರ ಮೂಲಕ ಆರೋಗ್ಯವಂತರಾಗಲು ಮಾರ್ಗದರ್ಶಕವಾಗಿದೆ ಎಂದು ಹೇಳಿದರು.
ಯೋಗರತ್ನ ಗೋಪಾಲಕೃಷ್ಣ
ದೇಲಂಪಾಡಿ ಮಾತನಾಡಿ, ಕಾಯಿಲೆಗಳ ನಿಯಂತ್ರಣಕ್ಕೆ ಮಂತ್ರ ಮುದ್ರೆಯನ್ನಿ ಮಾಡಿದಾಗ ಮೆದುಳಿನ ಜೀವಕೋಶಗಳು ಪುನಶ್ಚೇತನ
ಗೊಳ್ಳುತ್ತವೆ. ಇದರಿಂದಾಗಿ ರಕ್ತ ಸಂಚಾರವು ಸರಾಗವಾಗುತ್ತದೆ. ಈ ಮೂಲಕ ಪ್ರಾಣ ಶಕ್ತಿ ಹೇಚ್ಚಾಗುತ್ತದೆ.
ಇದನ್ನು ಶಬಿರದಲ್ಲಿ ನಾವು ಅಭ್ಯಾಸ ಮಾಡಿ ಮುಂದಿನ ದಿನಗಳಲ್ಲಿ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು
ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ವಹಿಸಿದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸಿ.ನಾೈಕ್ ಯೋಗದಿಂದ ಆರೋಗ್ಯವಂತ
ಸಮಾಜ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಮಂಗಳೂರು
ವಕೀಲರ ಸಂಘದ ಉಪಾಧ್ಯಕ್ಷೆ ಪುಷ್ಪಲತಾ ಯು.ಕೆ., ಶಕ್ತಿ
ಎಜುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತಾಧಿಕಾರಿ
ಕೃಷ್ಣ ಕುಮಾರ್ ಸ್ವಾಗತಿಸಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ್ ಜಿ.ಎಸ್.
ವಂದನಾರ್ಪಣೆಗೈದರು.