ಸ್ಥಳೀಯ ಸಮಿತಿಗಳು ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡಲಿ: ರಾಘು ಎ. ಮೂಲ್ಯ ಪಾದೆಬೆಟ್ಟು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸ್ಥಳೀಯ ಸಮಿತಿಗಳು ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡಲಿ: ರಾಘು ಎ. ಮೂಲ್ಯ ಪಾದೆಬೆಟ್ಟು

Share This
ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನವು ಅ. 21ರಂದು ವಾಶಿಯ ನವಿಮುಂಬಯಿ ಕನ್ನಡ ಸಂಘದ ಸಭಾಗೃಹದಲ್ಲಿ ಸಂಘದ ಉಪಾಧ್ಯಕ್ಷರಾದ ರಘು ಎ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಅಧ್ಯಕ್ಷತೆಯನ್ನು ವಹಿಸಿದ ರಾಘು ಎ ಮೂಲ್ಯ ಪಾದೆಬೆಟ್ಟು ಅವರು ಮಾತನಾಡಿ, ಕುಲಾಲ ಸಮಾಜದ ಅಭಿವೃದ್ಧಿಯಲ್ಲಿ ಎಲ್ಲರೂ ಒಟ್ಟಗೆ ಚಿಂತನೆ ಮಾಡುವ ಅಗತ್ಯವಿದೆ.  ಸ್ಥಳೀಯ ಯುವಕರು ಸ್ವಯಂ ಇಚ್ಛೆಯಿಂದ ನಮ್ಮೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲು ಹರ್ಷವಾಗುತ್ತಿದೆ. ಈ ವರ್ಷ ಯುವಕರೇ ಮಕ್ಕಳನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ . ಇದೇ ರೀತಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಂಡು ಕೆಲಸಕ್ಕೆ ಸೇರಿದ ಯುವಕರು ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಕುಲಾಲ ಸಮಾಜ ಧರ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಗೌರವಿಸುವ ಸಮಾಜ. ಯುವಕರು ಹಿರಿಯರಿಗೆ ಗೌರವ ಕೊಡುತ್ತಾ ಅವರ ಮಾರ್ಗದರ್ಶನದಲ್ಲಿ ತನ್ನ ಲಕ್ಷ್ಯದತ್ತ ಸಾಗಕೇಕು. ಮಹಿಳಾ ವಿಭಾಗದ ವೈದ್ಯಕೀಯ ಧನಸಹಾಯ ಶ್ಲಾಘನೀಯ  ಎಲ್ಲಾ ಸ್ಥಳೀಯ ಸಮಿತಿಗಳು ಇತರರಿಗೆ ಮಾದರಿಯಾಗುವಂತಹ ಕೆಲಸಗಳನ್ನು ಮಾಡಬೇಕು, ಆಗ ಮಾತ್ರ ಸಂಘಟನೆ ಬಲಿಷ್ಟವಾಗಲು ಸಾಧ್ಯ ಎಂದರು.

ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಎಸ್ ಬಂಗೇರ ಸ್ವಾಗತಿಸಿದರೆ , ಬೇಬಿ ವಿ ಬಂಗೇರ, ಪದ್ಮ ಎಲ್ ಮೂಲ್ಯ  ಮತ್ತು ಉಷಾ ಆರ್ ಮೂಲ್ಯ ಪ್ರಾರ್ಥನೆ ಗೈದರು .  ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ರಮೇಶ್ ಬಂಜನ್ ಥಾಣೆ  ಮತ್ತು ಶ್ರುತಿ ಜೆ ಅಂಚನ್ ಸಹಕರಿಸಿದರು . ಸನ್ಮಾನಿತರ ಪರಿಚಯವನ್ನು ಮಾಲತಿ ಜೆ ಅಂಚನ್ ಮತ್ತು ಕೃಪೇಶ್ ಕುಲಾಲ್ ಮಾಡಿದರು .

ಸಭಾ ಕಾರ್ಯಕ್ರಮವನ್ನು ಎಲ್ ಆರ್ ಮೂಲ್ಯ ಮತ್ತು ಪಿ ಶೇಖರ್ ಮೂಲ್ಯ ನಿರೂಪಿಸಿದರೆ , ಸುರೇಶ್ ಕೆ ಕುಲಾಲ್ ಧನ್ಯವಾದವಿತ್ತರು . ಸಾಂಸ್ಕೃತಿಕ ಕಾರ್ಯಕ್ರಮವನ್ನು  ಶಶಿಕುಮಾರ್ ವಿ. ಕುಲಾಲ್ ಮತ್ತು ಸೂರಜ್ ಎಸ್ ಕುಲಾಲ್ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ಮತ್ತು ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಶಶಿಕುಮಾರ್ ವಿ. ಕುಲಾಲ್ ರಚಿಸಿ ನಿರ್ದೇಶಿಸಿದ  ಸ್ಥಳೀಯ ಸಮಿತಿಯ ಮಕ್ಕಳ ಅಭಿನಯದ "ಬಲೀಂದ್ರೆ" ಪೌರಾಣಿಕ ತುಳು ಕಿರುನಾಟಕ ಮತ್ತು ಸ್ಥಳೀಯ ಸದಸ್ಯರು ಅಭಿನಯಿಸಿದ "ಕಲ್ಜಿಗದ ಕರ್ಣೇ" ಎಂಬ ತುಳು ಸಾಮಾಜಿಕ ನಾಟಕಗಳು ಜನಮನ ರಂಜಿಸಿತು .

ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಕೃಷ್ಣ ಕೆ ಮೂಲ್ಯ, ಖಾರ್ಘರ್ ಮತ್ತು ಸುಮಿತ್ರಾ ರಾಜು ಸಾಲ್ಯಾನ್ ಇವರನ್ನು ಸನ್ಮಾನಿಸಲಾಯಿತು. ಅಲ್ಲದೆ ಸಮಾಜದ 6 ಮಕ್ಕಳನ್ನು ದತ್ತು ಸ್ವೀಕರಿಸಲಾಯಿತು. ನಾನಿಲ್ತಾರ್ ಕುಲಾಲ ಅಭಿಮಾನಿ ಬಳಗದ ವತಿಯಿಂದ ಮಂಗಳೂರು ಕುಲಾಲ ಭವನಕ್ಕೆ ಒಂದು ಲಕ್ಷದ ದೇಣಿಗೆ ಹಸ್ತಾಂತರಿಸಲಾಯಿತು,  ನವಿಮುಂಬಯಿ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೂಡಬಿದ್ರೆಯ ರಕ್ಷಿತಾ ಕುಲಾಲ್ ಗೆ ರೂ 20,000/- ಧನಸಹಾಯ ಹಸ್ತಾಂತರಿಸಲಾಯಿತು. ಸ್ಥಳೀಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಕುಲಾಲ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲ್ಯಾನ್, ಸಂಘದ ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್, ಸಂಘದ ಮಾಜಿ ಅಧ್ಯಕ್ಷ ಗಿರೀಶ್ ಬಿ ಸಾಲ್ಯಾನ್, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚಿತ್ರಾ ಡಿ ಬಂಜನ್, ಅಮೂಲ್ಯ ಸಂಪಾದಕ ಶಂಕರ್ ವೈ ಮೂಲ್ಯ, ಸಂಘದ ಠಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಡಿ. ಐ ಮೂಲ್ಯ, ಚರ್ಚ್ ಗೇಟ್ - ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಸಾಲ್ಯಾನ್, ಸಿ.ಎಸ್.ಟಿ. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಎಸ್ ಮೂಲ್ಯ, ಮೀರಾ ವಿರಾರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಮೋಹನ್ ಬಂಜನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ವರದಿ: ಈಶ್ವರ ಎಂ. ಐಲ್, ಚಿತ್ರ; ದಿನೇಶ್ ಕುಲಾಲ್

Pages