ಕಾರ್ಕಳ ರೆಂಜಾಳದ ಸಾಹಿತಿ ರಮಣ ಶೆಟ್ಟಿ ಮುಂಬೈಯವರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಾರ್ಕಳ ರೆಂಜಾಳದ ಸಾಹಿತಿ ರಮಣ ಶೆಟ್ಟಿ ಮುಂಬೈಯವರಿಗೆ ಸನ್ಮಾನ

Share This
BUNTS NEWS, ಕಾರ್ಕಳ: ಕನ್ನಡ ಸಾಹಿತ್ಯ. ಪರಿಷತ್ತು ಕಾರ್ಕಳ ತಾಲೂಕು ಘಟಕದ ವತಿಯಿಂದ ಸರಕಾರಿ ಸಂಯುಕ್ತ ಪ್ರೌಢಶಾಲೆ ರೆಂಜಾಳದಲ್ಲಿ ಸಂಸ್ಕೃತಿ ಸಿಂಚನ  ರೆಂಜಾಳದ ಸಹಕಾರದೊಂದಿಗೆ ವಿದ್ಯಾರ್ಥಿ ಸಾಹಿತ್ಯ ಸಮ್ಮಿಲನ ಮತ್ತು ಮುದ್ದಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿಯವರು ಉದ್ಘಾಟಿಸಿದರು. ವಿದ್ಯಾರ್ಥಿ ಸಮ್ಮಿಲದ ಅಧ್ಯಕ್ಷತೆಯನ್ನು ಅಕ್ಷಾ ಬೇಗಂ ವಹಿಸಿದ್ದರು. ವಿದ್ಯಾರ್ಥಿಗಳಿಂದ ಮುದ್ದಣನ ಬದುಕು ಬರೆಹದ ಬಗ್ಗೆ ಭಾಷಣ, ಸ್ವರಚಿತ ಕವಿತೆಗಳ ವಾಚನ, ಕಾರ್ಕಳದ ಖ್ಯಾತ ಗಾಯಕರಾದ ಅನಂತ ಪದ್ಮನಾಭ ಭಟ್ ಇವರಿಂದ ಕಾವ್ಯವಾಚನ ಕಾರ್ಯಕ್ರಮ ನಾಟಕ ಕಲೆಯ ಬಗ್ಗೆ ಪ್ರಸಿದ್ಧ ರಂಗತಜ್ಞ ರಾಮ್ ಶೆಟ್ಟಿ ಹಾರಾಡಿ ಅವರೊಂದಿಗೆ ಸಂವಾದ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕರಾದ ವಿ.ಸುನಿಲ್ ಕುಮಾರ್ ಅವರು ಮಕ್ಕಳನ್ನು ಸಮಾಧಾನಪಡಿಸಲು ಮೊಬೈಲ್ ನ್ನು ಕೈಗೆ ನೀಡುವ ಬದಲು ಒಳ್ಳೆಯ ಪುಸ್ತಕವನ್ನು ನೀಡಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ನಮ್ಮೊಳಗಿನ ಸಾಹಿತ್ಯವನ್ನು ಮರೆಯುತ್ತಿದ್ದೇವೆ. ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸಿ ಅವರಲ್ಲಿರುವ ಸಾಹಿತ್ಯವನ್ನು ಹೊರತರುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಬೇಕೆಂದರು.

ಕಾರ್ಯಕ್ರಮದಲ್ಲಿ  ಸಾಹಿತಿ ಹಾಗು ಖ್ಯಾತ ವಾಗ್ಮಿಗಳಾದ ಮುನಿರಾಜ ರೆಂಜಾಳ .ಸಾಹಿತಿ ರಮಣ್ ಶೆಟ್ಟಿ ಮುಂಬೈ.ಖ್ಯಾತ ಸ್ಯಾಕ್ಸ್ ಪೋನ್ ವಾದಕಿ ಪ್ರಾಪ್ತಿ ಶೆಟ್ಟಿ ಯವರನ್ನು ಸಂಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಹಾಗೂ ಶೈಕ್ಷಣಿಕಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ವಹಿಸಿದ್ದರು.

ವೇದಿಕೆಯಲ್ಲಿ ಮಹಾವೀರ್ ಹೆಗ್ಡೆ,ಪಂಚಾಯತ್ ಅಧ್ಕಕ್ಷರಾದ ವಾಸು ಶೆಟ್ಟಿ   ಮುಖ್ಯೋಪಾಧ್ಯಾಯರಾದ ಶಾಂತಮ್ಮ ಮತ್ತು ಸತೀಶ್ ಶೆಟ್ಟಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೋಭಾ ಮತ್ತು ಉಮೇಶ್ ಶೆಟ್ಟಿ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಸುಧಾಕರ ಶೆಣೈ .ಪ್ರಕಾಶ್ ನಾಯ್ಕ ಉಪಸ್ಥಿತರಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ದೇವದಾಸ ಕರೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗೌರವ ಕಾರ್ಯದರ್ಶಿ ಸುಧಾಕರ ಪೊಸ್ರಾಲ್ ವಂದಿಸಿ ಅಧ್ಯಾಪಕರಾದ ವಿನಾಯಕ್ ,ಮಂಜುನಾಥ ಮತ್ತು ಮಲ್ಲಿಕಾ ನಿರೂಪಿಸಿದರು  ರಾಜೇಶ್ ರೆಂಜಾಳ ,ಗಣೇಶ್ ಜಾಲ್ಸೂರು.ಶಿವಸುಬ್ರಹ್ಮಣ್ಯ ಭಟ್ ಸಹಕರಿಸಿದರು. ಚಿತ್ರ ವರದಿ: ಉಳೆಪಾಡಿ ಅರುಣಾ ಕುಲಾಲ್

Pages