ಪುತ್ತಿಗೆ ಮಠದ ಶ್ರೀಗಳಿಂದ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಂಕಲ್ಪ - BUNTS NEWS WORLD

ಪುತ್ತಿಗೆ ಮಠದ ಶ್ರೀಗಳಿಂದ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಂಕಲ್ಪ

Share This
ಉಡುಪಿ: ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಕಪ್ಪ ಕಾಣಿಕೆ ಸಮರ್ಪಣೆಯೊಂದಿಗೆ ದೇವಸ್ಥಾನದ ಜೀರ್ಣೋದ್ದಾರದ ಬ್ರಹಮಕಲಶೋತ್ಸವದ ಸಂಕಲ್ಪ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ಮಾತನಾಡಿದ ಶ್ರೀ ಪುತ್ತಿಗೆ ಶ್ರೀಪಾದರು, ಬ್ರಹ್ಮರಥವನ್ನು ಯಂತ್ರದ ಮೂಲಕ ಬ್ರಹ್ಮರಥವನ್ನು ದೇವಸ್ಥಾನದ ಸುತ್ತು ಎಳೆದರೆ ಅದು ರಥೋತ್ಸವ  ಎನ್ನಿಸುವುದಿಲ್ಲ, “ಗೋವಿಂದ ಗೋವಿಂದ” ಎಂದು ಭಕ್ತರೆಲ್ಲ ಒಟ್ಟಾಗಿ ಕೈ ಸೇರಿಸಿ ಎಳೆದರೆ ಮಾತ್ರ ಅದು ರಥೋತ್ಸವ ಅನ್ನಿಸುತ್ತದೆ. ಅದೇ ರೀತಿ ಊರಿನ ಭಕ್ತರೆಲ್ಲ  ಒಗ್ಗಟ್ಟಾಗಿ ಜಾತಿ ಮತ ಭೇದವಿಲ್ಲದೆ ಸೇರಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ನಡೆಸಿದರೆ ಅದು ನಿಜವಾದ ಉತ್ಸವ ಆಗುತ್ತದೆ. ಅದರಿಂದ ಊರಿನ ಎಲ್ಲಾ ಭಕ್ತರಿಗೂ ದೇವರ ವಿಶೇಷ ಅನುಗ್ರಹವಾಗುತ್ತದೆ. ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಎಲ್ಲಾ ಭಕ್ತರು ಪವಿತ್ರ ಕಾರ್ಯದಲ್ಲಿ ಸಂಪೂರ್ಣ ಪಾಲ್ಗೊಂಡು ಶ್ರೀ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಲೆಂದು ಹಾರೈಸಿದರು.

ಈ ಸಂದರ್ಭ ದೇವಸ್ಥಾನದ ತಂತ್ರಿಗಳು, ಅರ್ಚಕವೃಂದ ಹಾಗೂ ಊರಿನ ಸಮಸ್ತ ಭಕ್ತರೂ ಅಧಿಕ ಸಂಖ್ಯೆಯಲ್ಲಿ ಬಂದು ಕಪ್ಪ ಕಾಣಿಕೆ ಸಮರ್ಪಿಸಿದರು.

Pages