ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ
ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿಯ ಸಪ್ತಮಿ ತಿಥಿಯಂದು ಜೋಡಿ
ಚಂಡಿಕಾಯಾಗ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಅವರ
ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು.
ಉಡುಪಿಯ
ಜೆಎಂಟಿ ಟ್ರಾವೆಲ್ಸ್ನಮಾಲೀಕರಾದ ಶ್ರೀಲತಾ ಆನಂದ ಬಾಯರಿ
ಹಾಗೂ ಮನೆಯವರು ಹಾಗೂ ಪುಷ್ಪ
ಎಳ್ಳಾರೆ ಮತ್ತು ಮನೆಯವರ ಚಂಡಿಕಾಯಾಗ
ಸಮರ್ಪಿತಗೊಂಡಿತು. ಪುತ್ತೂರಿನ ಬಾಲಚಂದ್ರ ಸೊರಕೆ ಇವರ ತುಲಾಭಾರ
ಸೇವೆ ನೆರವೇರಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯಲ್ಲಿ
ಸಹಸ್ರಾರು ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದುಷಿ ಕುಮಾರಿ ಶ್ರಾವ್ಯ
ಮತ್ತು ಬಳಗದವರಿಂದ ನೃತ್ಯಾರ್ಪಣೆ ಕಾರ್ಯಕ್ರಮ ನೆರವೇರಿತು.