ಅಬುಧಾಬಿ ಕನ್ನಡ ರಾಜ್ಯೋತ್ಸವ : ಡಾ. ಬಿ. ಆರ್ ಶೆಟ್ಟಿ ಅವರಿಗೆ ‘ಕರ್ನಾಟಕ ರತ್ನ' ಪ್ರಶಸ್ತಿ ಪುರಸ್ಕಾರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅಬುಧಾಬಿ ಕನ್ನಡ ರಾಜ್ಯೋತ್ಸವ : ಡಾ. ಬಿ. ಆರ್ ಶೆಟ್ಟಿ ಅವರಿಗೆ ‘ಕರ್ನಾಟಕ ರತ್ನ' ಪ್ರಶಸ್ತಿ ಪುರಸ್ಕಾರ

Share This
BUNTS NEWS, ಅಬುಧಾಬಿ: ಅಬುದಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವು ನ.2ರಂದು ಅಬುಧಾಬಿಯ ಇಂಡಿಯ ಸೋಶಿಯಲ್ ಕಲ್ಚರಲ್ ಸೆಂಟರ್ ನಲ್ಲಿ ಬೆಳಿಗ್ಗೆ 10:30ರಿಂದ ಬಹಳ ವಿಜೃಂಭಣೆಯಿಂದ ಜರಗಲಿರುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಪೋಷಕರಾದ ಡಾ.ಬಿರ್.ಶೆಟ್ಟಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಯುಎಇ ಭಾರತೀಯ ರಾಯಭಾರಿ ನವದೀಪ್ ಸುರಿ ಹಾಗೂ ಹಾಸ್ಯ ಭಾಷಣಗಾರ ಪ್ರೋ.ಕೃಷ್ಣೇ ಗೌಡ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಯುಎಇ ಕನ್ನಡಿಗರು ಮಹಾಪೋಷಕರಾದ ಡಾ.ಬಿ.ಆರ್ ಶೆಟ್ಟಿ ಅವರಿಗೆ "ಕರ್ನಾಟಕ ರತ್ನ" ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಈ ಸಂದರ್ಭ ಶೈಕ್ಷಣಿಕ ರಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ ಅಬುಧಾಬಿ ಕರ್ನಾಟಕ ಸಂಘದ ಸದಸ್ಯರಿಂದ ವಿವಿಧ ಸಮೂಹ ಗಾನ, ಜಾನಪದ ನೃತ್ಯಗಳು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಈ ಮೂಲಕ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿರಿ: ಸರ್ವೋತ್ತಮ ಶೆಟ್ಟಿ: 050-6125 464, ಸುಧೀರ್ ಶೆಟ್ಟಿ: 050- 6427 903, ಪ್ರದೀಪ್ ಕಿರೋಡಿಯನ್: 050-4953 432, ಮೆಲ್ವಿನ್ ಫೆರ್ನಾಂಡೀಸ್: 055-4057 569, ವಿಜಯ್ ರಾವ್: 055-5528 307, ಮನೋಹರ್ ತೋನ್ಸೆ: 050-5212 079, ರವೀಂದ್ರ ರೈ: 050-6176 149, ಬೆನ್ನೆಟ್ ಡಿ ಮೆಲ್ಲೊ: 050-6429 616, ಅಬ್ದುಲ್ಲ ಮಾಧುಮೂಲೆ:050-4451 092, ಅಲ್ತಾಫ್ ಎಂ.ಎಸ್: 055-2212 792, ಯೋಗಿಶ್ ಪ್ರಭು: 050-6613 735, ಉಮೇಶ್ ರಾವ್: 055-7566 385, ಲೊಯೊಲ್ಲ ಪಿಂಟೋ: 050-8189 788, ಭವಾನಿ ಶಂಕರ್ ಶರ್ಮ: 056-9915 304

Pages