ಮಂಗಳೂರು: ಹ್ಯುಮಾನಿಟಿ ಸಂಸ್ಥೆಯ ಮೂಲಕ ಕಷ್ಟದಲ್ಲಿರುವವರಿಗೆ
ಸಹಾಯ ಮಾಡುತ್ತಿರುವ ಸಮಾಜ ಸೇವಕ ಬೆಳ್ಮಣ್ ರೋಶನ್ ಡಿಸೋಜಾ ಅವರು ಈ ಭಾರಿಯ ‘ಪಿಂಗಾರ ರಾಜ್ಯೋತ್ಸವ
2018ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಸಮಾರಂಭವು ನ.13ರಂದು
ಪುರಭವನದಲ್ಲಿ ಜರಗಲಿದ್ದು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂ.ಡಾI ಪೀಟರ್ ಪೌಲ್ ಸಲ್ಡಾನಾ
ರೋಶನ್ ಡಿಸೋಜಾರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಮಾರು ಶ್ರೀ ಈಶವಿಠಲದಾಸ
ಸ್ವಾಮೀಜಿ ಆರ್ಶಿವಚನ ನೀಡಲಿರುವರು.
ಮುಖ್ಯ ಅತಿಥಿಯಾಗಿ
ಶಾಸಕ ವೇದವ್ಯಾಸ ಕಾಮತ್, ಎಮ್ಎಲ್ಸಿ ಐವನ್ ಡಿಸೋಜಾ, ಮಾಜಿ ಶಾಸಕ ಜೆ.ಆರ್.ಲೋಬೊ ಹಾಗೂ ಗೌರವ ಅತಿಥಿಯಾಗಿ
ಪಿಂಗಾರ ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ರೋಯ್ ಕಾಸ್ತೆಲಿನೊ, ಧರ್ಮದರ್ಶಿ ಹರಿಕೃಷ್ಣ ಪುನರೂರು,
ಎಡಿಪಿಐ ರಾಜ್ಯಾಧ್ಯಕ್ಷ ಎಲಿಯಾಸ್ ಮುಹಮ್ಮದ್ ತುಂಬೆ ಭಾಗವಹಿಸಲಿದ್ದಾರೆ.