ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥದಾರಿ ಕೆ. ಕೆ. ಶೆಟ್ಟಿ ಅವರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥದಾರಿ ಕೆ. ಕೆ. ಶೆಟ್ಟಿ ಅವರಿಗೆ ಸನ್ಮಾನ

Share This
ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿಯ ಪ್ರಾಯೋಜಕತ್ವದಲ್ಲಿ 15ನೇ ವಾರ್ಷಿಕ ಸ್ನೇಹ ಸಮ್ಮಿಲನದ ಪ್ರಯುಕ್ತ ರಂಗಭೂಮಿ ಫೈನ್ ಆರ್ಟ್ಸ್ ನವಿಮುಂಬಯಿ ಇದರ 'ಶೇಣಿ ಶತ ಸ್ಮರಣೆ' ಯಕ್ಷಗಾನ ತಾಳಮದ್ದಳೆ ಸಪ್ತಾಹದ ಅಂಗವಾಗಿಗಿರಿಜಾ ಕಲ್ಯಾಣಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಅ.26ರಂದು ನೆರೂಲ್   ಶ್ರೀ ಶನೀಶ್ವರ ಮಂದಿರದಲ್ಲಿ ಜರಗಿತು.
  ಸಂದರ್ಭದ ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥದಾರಿ ಕೆ. ಕೆ. ಶೆಟ್ಟಿ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಯಾವುದೇ ಪೂರ್ವ ಸೂಚನೆ ನೀಡದೆ ಸ್ಥಳೀಯ ಸಮಿತಿ ನನ್ನನ್ನು ಸತ್ಕರಿಸಿದೆ. ನಾನು ಇವರಿಗೆ ಚಿರಋಣಿ. ಅಪಾರ ಸಂಖ್ಯೆಯಲ್ಲಿ ಇಂದಿನ ತಾಳಮದ್ದಳೆಯಲ್ಲಿ ಯಕ್ಷಗಾನ ಪ್ರೇಮಿಗಳನ್ನು ಒಟ್ಟು ಸೇರಿಸಿದ ಸ್ಥಳೀಯ ಸಮಿತಿಯ ಕಾರ್ಯ ಅಭಿನಂದನೀಯ. ಯಕ್ಷಗಾನ ರಂಗದಲ್ಲಿ ಮತ್ತು ನಾಟಕ ರಂಗದಲ್ಲಿ  ಕುಲಾಲ ಸಮಾಜದ ಕಲಾವಿದರು ತುಂಬಾ ಮಂದಿ ಇದ್ದಾರೆ. ಕಲಾಸೇವೆಯಲ್ಲಿ ಕುಲಾಲ ಸಮಾಜ ಮುಂಚೂಣಿಯಲ್ಲಿದೆ. ಕುಲಾಲ ಸಂಘದ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭಹಾರೈಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ರಘು ಮೂಲ್ಯ, ಗೌ ಕೋಶಾಧಿಕಾರಿ ಜಯ ಎಸ್ ಅಂಚನ್, ಮಂಗಳೂರು ಕುಲಾಲ ಭವನದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾದ  ಗಿರೀಶ್ ಬಿ. ಸಾಲ್ಯಾನ್, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ವಾಸು ಎಸ್ ಬಂಗೇರ, ಕಾರ್ಯದರ್ಶಿ ಎಲ್. ಆರ್. ಮೂಲ್ಯ, ಸ್ಥಳೀಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಲಾ ಮೂಲ್ಯ, ರಂಗಭೂಮಿ ಪೈನ್ ಆರ್ಟ್ಸ್ ಅಧ್ಯಕ್ಷರಾದ ತಾರಾನಾಥ್ ಶೆಟ್ಟಿ ಪುತ್ತೂರು, ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಬಾಲಚಂದ್ರ ರಾವ್, ಶ್ರೀ ಶನೀಶ್ವರ ಮಂದಿರದ ಜೊತೆ ಕೋಶಾಧಿಕಾರಿ ಕರುಣಾಕರ್ ಆಳ್ವ ಮತ್ತು  ರಂಗಭೂಮಿ ಪೈನ್ ಆರ್ಟ್ಸ್ ಕೋಶಾಧಿಕಾರಿ ಹಾಗೂ ಬಂಟ್ಸ್ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪಾ ಡಿ ಶೆಟ್ಟಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ನವಿಮುಂಬಯಿ ಸ್ಥಳೀಯ ಸಮಿತಿಯ ಪರವಾಗಿ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು. ರಂಗಭೂಮಿ ಪೈನ್ ಆರ್ಟ್ಸ್ ಪರವಾಗಿ ಅಂದಿನ ಪ್ರಾಯೋಜಕತ್ವ ವಹಿಸಿದ್ದ  ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷರಾದ ವಾಸು ಎಸ್ ಬಂಗೇರ ಇವರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮವನ್ನು ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ನಿರೂಪಿಸಿ, ಆಭಾರ ಮನ್ನಿಸಿದರು. ಕಾರ್ಯಕ್ರಮದ ಯಶಸ್ಸಿನಲ್ಲಿ ಸ್ಥಳೀಯ ಸಮಿತಿಯ ಜೊತೆ ಕಾರ್ಯದರ್ಶಿ ಹರೀಶ್ಚಂದ್ರ ಮೂಲ್ಯ, ಜೊತೆ ಕೋಶಾಧಿಕಾರಿ ಕೃಪೇಶ್ ಕುಲಾಲ್, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಶಶಿಕುಮಾರ್ ವಿ. ಕುಲಾಲ್, ಸಮಿತಿಯ ಸದಸ್ಯರಾದ ಭೋಜ ಬಿ. ಬಂಗೇರ,  ಕೃಷ್ಣ ಸಿ. ಕುಕ್ಯಾನ್, ಬಿ. ಜಿ. ಅಂಚನ್, ರಾಜೇಶ್ ಕುಲಾಲ್, ಕೃಷ್ಣ ಕೆ. ಮೂಲ್ಯ ಸಹಕರಿಸಿದರು.

Pages