BUNTS NEWS, ಬಂಟ್ವಾಳ: ಮುಡಿಪುವಿನಲ್ಲಿರುವ ನಯನ ಮನೋಹರ ಪ್ರದೇಶದಲ್ಲಿ
ಡಾ। ಮದನ್
ಮೋಹನ್ ನಾಯ್ಕ್ ರವರ ಅಪೂರ್ವವಾದ
ಪ್ರಾಚೀನ ವಸ್ತು ಸಂಗ್ರಹಾಲಯ ಮತ್ತು
180ಅಡಿ ಎತ್ತರದ ಶ್ರೀ ಕೃಷ್ಣ
ಮಂದಿರಕ್ಕೆ ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ
ಅವರು ಭೇಟಿ ನೀಡಿದರು.
ಹಿರಿಯ ಮುತ್ಸದ್ಧಿ, ವಜ್ರದಂತ ವ್ಯಕಿತ್ವ ಹೊಂದಿರುವ
ಡಾ। ಮದನ್
ಮೋಹನ್ ನಾಯ್ಕ್ ರವರು ಈ
ಸಂದರ್ಭ ಜೊತೆಗಿದ್ಜು ಯೋಜನೆಯ
ಸಮಗ್ರ ಮಾಹಿತಿಯನ್ನು ನೀಡಿದರು. ನಂತರ
ಒಕ್ಕೂಟದ ಅಧ್ಯಕ್ಷರ ಸಮೇತ ಪದಾಧಿಕಾರಿಗಳೆಲ್ಲರೂ ಯೋಜನೆಗೆ
ಶುಭ ಹಾರೈಸಿದ ನಂತರ ಡಾ। ನಾಯ್ಕ್
ಅವರು ಸಂತೋಷದಿಂದ ಬೀಳ್ಕೊಟ್ಟರು.
ಈ ಸಂದರ್ಭ
ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ಕೋಶಾಧಿಕಾರಿ ಕೊಲ್ಲಾಡಿ
ಬಾಲಕೃಷ್ಣ ರೈ, ಒಕ್ಕೂಟ ನಿರ್ದೇಶಕರಲ್ಲಿ
ಓರ್ವರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ
ಮತ್ತು ಸುರೇಶ್ ಶೆಟ್ಟಿ ಸೂರಿಂಜೆಯವರು
ಉಪಸ್ಥಿತರಿದ್ದರು.