ಮಂಗಳೂರು: ಇಂದಿನ ಯುವಜನತೆ ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡು
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಬರುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಅನಿವಾರ್ಯ ಎಂಬುದಾಗಿ
ದಕ್ಷಿಣಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಾಡ್ಲೂರು ಸತ್ಯನಾರಾಯಣ ಆಚಾರ್ಯ ಅಭಿಪ್ರಾಯ
ವ್ಯಕ್ತಪಡಿಸಿದರು.
ಅವರು ಡಾ.ಪಿ.ದ.ಪೈ-ಪಿ.ಸ.ಪೈ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ರಥಬೀದಿ ಹಾಗೂ ಜಿಲ್ಲಾ ಕಾನೂನು
ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಏರ್ಪಡಿಸಿದ ವಿಶ್ವಮಾನಸಿಕ ಆರೋಗ್ಯದ ಪ್ರಯುಕ್ತ ಕಾರ್ಯಕ್ರಮದಲ್ಲಿ
ಮಾತನಾಡಿದರು. ಮಾನಸಿಕ ಆರೋಗ್ಯಇತರೆಎಲ್ಲಾ ಆರೋಗ್ಯಗಳಿಗಿಂತ ಹೆಚ್ಚು ಅವಶ್ಯಕ. ಮನಸ್ಸು, ವಿವೇಕ ಸರಿಇದ್ದಲ್ಲಿ
ಬಾಹ್ಯ ಚಟುವಟಿಕೆಗಳು ಅರ್ಥಪೂರ್ಣವಾಗಿರುತ್ತದೆ ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ
ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಂಗಾಧರಎ.ಜೆಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರ್ ಹೆಬ್ಬಾರ್ ಸಿ ಅವರು ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು
ತಂತ್ರಜ್ಞಾನದಿಂದಾಗಿ ದಾರಿತಪ್ಪುತ್ತಿದ್ದು, ಅವರನ್ನು ಸರಿ ಮಾರ್ಗಕ್ಕೆ ತರುವುದು ವಿದ್ಯಾಸಂಸ್ಥೆಗಳ
ಹೊಣೆ ಎಂದು ಅಭಿಪ್ರಾಯಿಸಿದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕು. ಹರ್ಷಿತ ಎಂ.ವಿ
ಹಾಗೂ ಸ್ಮಿತೇಶ್‍ಬಾರ್ಯ ಭಾಗವಹಿಸಿದರು.
ಕಾಲೇಜು ಶೈಕ್ಷಣಿಕ
ಸಲಹೆಗಾರರಾದ ಡಾ. ಶಿವರಾಮ ಪಿ, ಪ್ರಾಧ್ಯಾಪಕರಾದ ಡಾ.ಪ್ರಕಾಶಚಂದ್ರ ಬಿ, ಡಾ. ನಾಗಪ್ಪಗೌಡ ಕೆ, ಡಾ.ಶೈಲಾರಾಣಿ
ಬಿ, ಡಾ.ಶರ್ಮಿಳಾ ರೈಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ
ಡಾ.ತೆರೆಸಾ ಪಿರೇರಾ ನಿರೂಪಿಸಿದರು.ಕನ್ನಡ ಪ್ರಾಧ್ಯಾಪಕರಾದ ರವಿಕುಮಾರ ಎಂ.ಪಿ ವಂದಿಸಿದರು.