BUNTS NEWS, ಮುಂಬಾಯಿ: ಕಾಂದಿವಲಿ ಪಸ್ಚಿಮ ಚಾರ್ಕೋಪ್ ಪರಿಸರದ
ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಚಾರ್ಕೋಪ್
ಕನ್ನಡಿಗರ ಬಳಗದ 19ನೇ ವಾರ್ಷಿಕೋತ್ಸವದ
ಅಂಗವಾಗಿ ಸಾಧಕರಿಗೆ ಸನ್ಮಾನವು ಅ. 14 ರಂದು ಕಾಂದಿವಲಿ ಪಶ್ಚಿಮದ
ಸೆಕ್ಟರ್ 6ರ
ಹರ್ಯಾಣ ಭವನದಲ್ಲಿ ಜರಗಿತು.
ಅಡ್ಯಾರು
ನಾಡಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಯನ್ನು
ಕ್ಲಾಸಿಕ್ ಹೋಟೇಲಿನ ಮಾಲಕ ಸುರೇಶ್
ಕಾಂಚನ್ ಅವರಿಗೆ ಕೆ.ಕೆ.
ಸುವರ್ಣ ಸ್ಮಾರಕ ಪ್ರಶಸ್ಥಿಯನ್ನು
ರಂಗ ನಿರ್ದೇಶಕ ನಾಗರಾಜ
ಗುರುಪುರ ಅವರಿಗೆ, ಹಾಗೂ
ಶ್ರೀಮತಿ ಭಾರತಿ ಕೊಡ್ಲೆಕರ್ ಸ್ಮರಣಾರ್ಥ
ಪ್ರಶಸ್ತಿಯನ್ನು ಹಿರಿಯ ರಂಗ ನಟಿ,
ಶಾಲಿನಿ ರಾವ್
ಅವರಿಗೆ ನೀಡಿ ಗೌರವಿಸಲಾಯಿತು.
ಅಮೇರಿಕಾದ
ಗ್ಲೋಬಲ್ ಪೀಸ್ ಪೌಂಡೇಶನ್
ನಿಂದ ಇಂಟರ್ ನೇಷನಲ್ ಮ್ಯಾನ್
ಆಫ್ ದ ಈಯರ್ 2018 ಪ್ರಶಸ್ತಿಯನ್ನು
ಪಡೆದ ಮಲಾಡ್ ಕನ್ನಡ ಸಂಘದ
ಅಧ್ಯಕ್ಷ ಹರೀಶ್ ಶೆಟ್ಟಿಯವರ ಪರವಾಗಿ
ಸಂಘದ ಪದಾದಿಕಾರಿಗಳು ಸ್ವೀಕರಿಸಿದರು, ಚಲನಚಿತ್ರ ಹಾಗೂ ಕಿರಿತೆರೆಯ ನಿರ್ದೇಶಕ
ರಾಘವೇಂದ್ರ ಹೆಗ್ಡೆ, ಅಕ್ಕ ಸಮ್ಮೇಳನದಲ್ಲಿ
ಮುಂಬಯಿಯ ಪ್ರತಿನಿಧಿಯಾಗಿ ಭಾಗವಹಿಸಿದ ಮುಂಬಯಿಯ ಕವಿ, ಸಾಹಿತಿ
ಗೋಪಾಲ ತ್ರಾಸಿಯವರನ್ನು ಗೌರವಿಸಲಾಯಿತು.
ಟ್ರಸ್ಟಿ
ಭಾಸ್ಕರ ಸರಪಾಡಿ ಮಾತನಾಡುತ್ತಾ ಈ
ಹಿಂದೆ ಚಾರ್ ಕೋಪ್ ಪರಿಸರದಲ್ಲಿ
ಕನ್ನಡಿಗರು ವಾಸ್ತಾವ ಹೂಡುದಕ್ಕೆ ಹಲವು
ರೀತಿಯ ಸಮಸ್ಯೆಗಳು ಎದುರಾಗಿದ್ದು ಅದಕ್ಕೆ ಅನುಗುಣವಾಗಿ ಸಂಸದರಾದ
ಗೋಪಾಲ ಶೆಟ್ಟಿಯವರ ಸಹಕಾರದಿಂದ ಚಾರ್ ಕೋಪ್ ಕನ್ನಡಿಗರ
ಬಳಗ ಹುಟ್ಟುದಕ್ಕೆ ಕಾರಣವಾಯಿತು. ಈಗ ಉತ್ತಮ ರೀತಿಯಲ್ಲಿ
ಪದಾಧಿಕಾರಿಗಳು ಈ ಸಂಸ್ಥೆಯನ್ನು ಮುನ್ನಡಿಸುತ್ತಿದ್ದಾರೆ. ಅರ್ಹತೆ
ಇದ್ದವರನ್ನು ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವೆವು ಎಂದರು.
ಜತೆ ಕಾರ್ಯದರ್ಶಿ ವಸಂತಿ ಸಾಲ್ಯಾನ್
ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ
ರಘುನಾಥ ಎನ್. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಒಟ್ಟು ಕಾರ್ಯಕ್ರಮವನ್ನು ನಿರ್ವಹಿಸಿದರು.
ಸನ್ಮಾನಿತರನ್ನು ಹರೀಶ್ ಚೇವಾರ್, ಚಂದ್ರಶೇಖರ
ಶೆಟ್ಟಿ ಮತ್ತು ರೂಪಾ ಭಟ್
ಪರಿಚಯಿಸಿದರೆ ವೇದಿಕೆಯ ಗಣ್ಯರನ್ನು ವಸಂತಿ
ಸಾಲ್ಯಾನ್,ಕೃಷ್ಣ ಶೆಟ್ಟಿ, ಲತಾ
ಬಂಗೇರ, ರಮೇಶ್ ಕೋಟ್ಯಾನ್, ಭಾಸ್ಕರ
ಸರಪಾಡಿ, ಶಾಂತಾ ಭಟ್, ಕೃಷ್ಣ
ಟಿ ಅಮೀನ್, ಪದ್ಮಾವತಿ ಬಿ.
ಶೆಟ್ಟಿ ಗೌರವಿಸಿದರು.
ವೇದಿಕೆಯಲ್ಲಿ
ಬಳಗದ ಟ್ರಸ್ಟಿಗಳಾದ ಜಯ ಸಿ. ಶೆಟ್ಟಿ,
ಭಾಸ್ಕರ ಸರಪಾಡಿ, ಎಂ. ಎಸ್.
ರಾವ್, ಗೌರವ ಪ್ರಧಾನ ಕಾರ್ಯದರ್ಶಿ
ರಘುನಾಥ ಎನ್. ಶೆಟ್ಟಿ, ಮಹಿಳಾ
ವಿಭಾಗದ ಕಾರ್ಯಧ್ಯಕ್ಷೆ ಪದ್ಮಾವತಿ ಬಿ ಶೆಟ್ಟಿ, ಗೌರವ
ಕೋಶಾಧಿಕಾರಿ ಗೌರಿ ಪಣಿಯಾಡಿ ಉಪಸ್ಥಿತರಿದ್ದರು.
ವರದಿ: ಈಶ್ವರ ಎಂ. ಐಲ್, ಚಿತ್ರ: ದಿನೇಶ್ ಕುಲಾಲ್