ವಿಶ್ವ ತುಳು ಸಮ್ಮೇಳನ ದುಬಾಯಿ 2018 : ಆಲ್ ಐನ್ ತುಳುವರ ಘಟಕ ಉದ್ಘಾಟನೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಿಶ್ವ ತುಳು ಸಮ್ಮೇಳನ ದುಬಾಯಿ 2018 : ಆಲ್ ಐನ್ ತುಳುವರ ಘಟಕ ಉದ್ಘಾಟನೆ

Share This
ದುಬೈ: ವಿಶ್ವ ತುಳು ಸಮ್ಮೇಳನ ದುಬಾಯಿ 2018ರ ಅಲ್ ಐನ್ ತುಳುವರ ನೂತನ ಘಟಕವನ್ನು ಸಾಗರೋತ್ತರ ತುಳುವರ ಮುಖ್ಯ ಸಂಘಟಕರಾದ ಸರ್ವೋತ್ತಮ ಶೆಟ್ಟಿಯವರು ಉದ್ಘಾಟಿಸಿದರು.
ಅಲ್ ಐನ್ ವಿಭಾಗದ ತುಳುವರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಶೆಟ್ಟಿ, ಶಾಲಿನಿ ಡಿಸೋಜಾ ಹಾಗೂ ಕಾರ್ಯಧ್ಯಕ್ಶರಾಗಿ ಆದರ್ಶ್ ಲೂವಿಸ್, ಉಮ್ಮರ್ ಫಾರೂಕ್ ಹಾಗೂ ಹದಿನಾರು ಮಂದಿ ಸದಸ್ಯರಾಗಿ ಜವಬ್ಧಾರಿಯನ್ನು ವಹಿಸಿಕೊಂಡರು.

ಅಲ್ ಐನ್ ಶಂಕರ್ ನಾಯಕ್ ರವರ "ಹಾಟ್ ಎನ್ ಸ್ಪೈಸಿ" ರೆಸ್ಟೊರೆಂಟ್ ನಲ್ಲಿ ಸೆ.21ರಂದು ನಡೆದ ಸಭೆಯಲ್ಲಿ ಸರ್ವೋತ್ತಮ ಶೆಟ್ಟಿಯವರು ವಿಶ್ವ ತುಳು ಸಮ್ಮೇಳನದ ಪೂರ್ವ ತಯಾರಿಯ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿ ಸರ್ವರ ಸಹಕಾರವನ್ನು ಕೋರಿದರು.

ಸಲಹಾ ಸಮಿತಿಯ ಸದಸ್ಯರು ಹಾಗೂ "ವಿಶ್ವ ತುಳು ಐಸಿರಿ" ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾದ ಬಿ. ಕೆ. ಗಣೇಶ್ ರೈ ಯವರು ಸ್ಮರಣ ಸಂಚಿಕೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.

Pages