ಮಂಗಳೂರು: ಶಕ್ತಿನಗರದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಶಕ್ತಿ ಶಾಲೆಯ ಶಿಕ್ಷಕರಿಗೆ ‘ತರಗತಿ ಸಂವಹನ
ಕಲೆ’ ಹಾಗೂ ‘ಮಾನವ ಸಂಪನ್ಮೂಲ ಅಭಿವೃದ್ಧಿ’ಯ ವಿಶೇಷ ಕಾರ್ಯಗಾರವು ಶನಿವಾರ ನಡೆಯಿತು.
ಕಾರ್ಯಗಾರದ
ಮುಖ್ಯ ಅತಿಥಿ ಕರಾವಳಿ ಕಾಲೇಜಿನ ಉಪನ್ಯಾಸಕಿ ಮಾಧುರಿ ಶ್ರೀರಾಮ್ ಮಾತನಾಡಿ, ಜೀವನದಲ್ಲಿ ನಮ್ಮನ್ನು
ನಾವು ಗಟ್ಟಿಗೊಳಿಸಿದಾಗ ಮಾತ್ರವೇ ನಮ್ಮ ಜೀವನ ಉತ್ತಮವಾಗುತ್ತದೆ. ಪ್ರತಿಯೊಬ್ಬರಲ್ಲೂ ಶಕ್ತಿಯಿದ್ದು
ಅದರಿಂದ ನಮಗೆ ಹಾಗೂ ನಮ್ಮ ಸುತ್ತಲಿನವರಿಗೂ ಉಪಯೋಗವಾಗಬೇಕು ಆಗ ಮಾತ್ರವೇ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ.
ಇದುವೇ ಮಾನವ ಸಂಪನ್ಮೂಲ ಅಭಿವೃದ್ಧಿಯ ತಾತ್ಪರ್ಯವಾಗಿದೆ. ಶಿಕ್ಷಣ ಸಂಸ್ಥೆಯೆಂಬುದು ಮುಂದಿನ ಅನೇಕ
ಮಹಾನ್ ವ್ಯಕ್ತಿಗಳ ತಳಪಾಯವಾಗಿದ್ದು ಶಿಕ್ಷಕರು ಸರಿಯಾದ ಗುರಿಯಲ್ಲಿ ಮಕ್ಕಳು ಸಾಗುವಂತೆ ನೋಡಿಕೊಳ್ಳಬೇಕು
ಎಂದರು.
ಮಾನವ
ಸಂಪನ್ಮೂಲ ಅಭಿವೃದ್ಧಿ ಕಾರ್ಯಗಾರವು ಪ್ರತಿಯೊಂದು ಶಿಕ್ಷಕರಿಗೆ ಅಗತ್ಯವಿದ್ದು ಆತ್ಮಸ್ಥೆರ್ಯ, ನಾಯಕತ್ವ
ಹಾಗೂ ಧೈರ್ಯವನ್ನು ತುಂಬಬಲ್ಲುದು. ಶಿಕ್ಷಕರು ಜ್ಞಾನ, ಪ್ರತಿಭೆಯನ್ನು ಬೆಳೆಸಿಕೊಂಡು ಮಕ್ಕಳಿಗೆ ಶಿಕ್ಷಣದ
ಮೂಲಕ ನೀಡಬೇಕು. ಶಕ್ತಿ ಶಿಕ್ಷಣ ಸಂಸ್ಥೆಯು ಶಿಕ್ಷಕರಿಗಾಗಿ ಇಂತಹ ಕಾರ್ಯಗಾರ ಎರ್ಪಡಿಸಿದ್ದು ಶ್ಲಾಘನೀಯವಾಗಿದೆ.
ಇಲ್ಲಿ ಶಿಕ್ಷಣ ಕಲಿಕೆಗೆ ಉತ್ತಮ ವಾತಾವರಣವಿದ್ದು ಶಿಕ್ಷಕರು ಸಂಸ್ಥೆಯನ್ನು ಬೆಳಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ
ಮತ್ತೋರ್ವ ಮುಖ್ಯ ಅತಿಥಿ ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮಾತನಾಡಿ,
ಶಿಕ್ಷಕರು ನಮ್ಮ ದೇಶವನ್ನು ಬೆಳೆಸುವ, ಬೆಳಗುವ ಜವ್ದಾಬಾರಿ ತಮ್ಮ ಮೇಲಿರುವುದನ್ನು ಅರಿತು ಕೆಲಸಮಾಡಬೇಕು.
ಭಾಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಶಿಕ್ಷಕರು ಭಾಷೆ ಮಹತ್ವ ಅರಿತು
ತಮ್ಮಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಸಿ. ನಾೈಕ್ ವಹಿಸಿದ್ದರು.
ಆಡಳಿತ ಮಂಡಳಿ ಸದಸ್ಯೆ ಸಗುಣ ಸಿ. ನಾೈಕ್, ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಮಾರ್ಗದರ್ಶಕ
ರಮೇಶ್. ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಂ ಬಾನು, ಶ್ರೀ ಗೋಪಾಲಕೃಷ್ಣ ಪ್ರಿ ಸ್ಕೂಲ್‍ನ ನೀಮಾ
ಸಕ್ಸೇನಾ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್ ಸ್ವಾಗತಿಸಿದರು.
ಶಶಿಕಲಾ ಎಂ.ಎನ್ ನಿರೂಪಿಸಿದರು. ಶಾಲಾ ಶಿಕ್ಷಕಿ ಅಶ್ವಿತಾ ವಂದಿಸಿದರು.