BUNTS NEWS, UAE: ಸರಕಾರಿ ಹಿ.ಪ್ರಾ.
ಶಾಲೆ ಕಾಸರಗೋಡು -ಕೊಡುಗೈ ರಾಮಣ್ಣ ರೈ
ಚಿತ್ರವು ಕೇರಳ ಕರ್ನಾಟಕದ ಚಿತ್ರ
ಮಂದಿರದಲ್ಲಿ ಭರ್ಜರಿ
ಪ್ರದರ್ಶನವನ್ನು ಕಂಡು ಸಾಗರದಾಚೆಗಿನ
ದುಬಾಯಿಯಲ್ಲೂ ಅದ್ಬುತ ಪ್ರದರ್ಶನವನ್ನು ಕಾಣುತ್ತಿದೆ.
ಈ ಚಿತ್ರವು ಪ್ರಪ್ರಥಮ
ಭಾರಿಗೆ ಕಾಸರಗೋಡಿನಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಹೆಗ್ಗಳಿಕೆಗೆ
ಪಾತ್ರವಾಗಿದೆ.
ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿ ಬಂದ ಈ
ಚಿತ್ರದಲ್ಲಿ ಕಾಸರಗೋಡಿನ ಹಲವು ಯುವ ಕಲಾವಿದರು
ನಟಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು
ಪ್ರದರ್ಶಿಸಿದ್ದಾರೆ. ಮುಖ್ಯವಾಗಿ ನಮ್ಮ ಊರಿನ ಯಕ್ಷಗಾನ
ಅರ್ಥಧಾರಿ ನಾಗರಾಜ ಪದಕಣ್ಣಾಯ ಮುಡಂಬೈಲ್
ಮುಖ್ಯೋಪಾಧ್ಯಯರ ಪಾತ್ರದ ಮೂಲಕ ಮೆಚ್ಚುಗೆಗಳಿಸಿದ್ದಾರೆ.
ವಿಜಯ ಕುಮಾರ್ ಶೆಟ್ಟಿ ಮಜಿಬೈಲ್ |
ಇನ್ನಾದರು
ನಮ್ಮ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ. ಸೆಪ್ಟೆಂಬರ್
20 ರಿಂದ 26 ರ ವರೆಗೆ ದುಬಾಯಿಯಲ್ಲಿ
ಪ್ರದರ್ಶನಗೊಳ್ಳಲಿದೆ. ದುಬಾಯಿಯಲ್ಲೂ ಚಿತ್ರವು ಯಶಸ್ವಿ ಪ್ರದರ್ಶನಗೊಂಡು
ಮುಂದೆಯೂ ಇಂತಹ ಚಿತ್ರವು ತೆರೆ
ಕಾಣಲಿ ಎಂದು ಹಾರೈಸುತ್ತೇನೆ - ವಿಜಯ ಕುಮಾರ್
ಶೆಟ್ಟಿ ಮಜಿಬೈಲ್ (ದುಬಾಯಿ)