BUNTS NEWS, ಸುರತ್ಕಲ್: ಸುರತ್ಕಲ್ ಬಂಟರ ಸಂಘ ಇದರ
18ನೇ ವಾರ್ಷಿಕ ಮಹಾಸಭೆ, ಅಭಿನಂದನೆ
ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು
ಸೆಪ್ಟಂಬರ್ 30ರಂದು ಭಾನುವಾರ
ಸುರತ್ಕಲ್ ಬಂಟರಭವನದಲ್ಲಿ ಜರಗಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ನೂತನ ನಿರ್ದೇಶಕ
ಸಭೆ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ
ಸಮಿತಿ ಸದಸ್ಯರ ಆಯ್ಕೆ ನಡೆಯಲಿದೆ. ಬೆಳಿಗ್ಗೆ
11 ಗಂಟೆಗೆ ಮಹಾಸಭೆ ಜರಗಲಿದೆ. 12 ಗಂಟೆಗೆ
ಗ್ರಾಮವಾರು ಸಾಂಸ್ಕøತಿಕ ಸ್ಪರ್ಧೆ
ನಡೆಯಲಿದೆ. ಸಂಜೆ 5 ಗಂಟೆಗೆ ಅಭಿನಂದನೆ
ವಿದ್ಯಾರ್ಥಿ ವೇತನಾ
ವಿತರಣಾ ಸಮಾರಂಭ ಜರಗಲಿದೆ.
ಸಮಾರಂಭದ
ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ
ಉಲ್ಲಾಸ್ ಆರ್ ಶೆಟ್ಟಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಡಾ. ವೈ
ಭರತ್ ಶೆಟ್ಟಿ, ಬಂಟರ ಯಾನೆ
ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ
ಅಜಿತ್ ಕುಮಾರ್ ರೈ, ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ
ಐಕಳ ಹರೀಶ್ ಶೆಟ್ಟಿ, ಭವಾನಿ
ಶಿಪ್ಪಿಂಗ್ನ ಆಡಳಿತ ನಿರ್ದೇಶಕ
ಕೆ.ಡಿ. ಶೆಟ್ಟಿ ಮುಂಬಾಯಿ,
ಎ.ಕೆ. ಗ್ರೂಪ್
ಅಫ್ ಕಂಪೆನಿಯ ಚಯರ್ಮೆನ್ ಕರುಣಾಕರ ಎಂ
ಶೆಟ್ಟಿ ಮಧ್ಯಗುತ್ತು, ಉದ್ಯಮಿ ಭಾಸ್ಕರ ಶೆಟ್ಟಿ
ನಡ್ಯೋಡಿಗುತ್ತು ಎಕ್ಕಾರ್, ಮೀರಾ ದಹಣು ಬಂಟ್ಸ್
ಮುಂಬೈನ ಅಧ್ಯಕ್ಷ ವಿರಾರ್ ಶಂಕರ
ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ
ಉಪೇಂದ್ರ ಶೆಟ್ಟಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ
ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ
ಮುನಿಯಾಲು ಉದಯ ಶೆಟ್ಟಿ, ಉದ್ಯಮಿ
ರಮಾನಾಥ ಶೆಟ್ಟಿ, ದಿವಾಕರ ಬಿ.
ಶೆಟ್ಟಿ ಕುಡುಂಬೂರು, ಪ್ರೇಮ್ ಶೆಟ್ಟಿ ಸುರತ್ಕಲ್
ಮೊದಲಾದವರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ
ಎಸ್ಎಸ್ಎಲ್ಸಿ,
ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ
ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು
ಸನ್ಮಾನಿಸಲಾಗುವುದು. ಅಲ್ಲದೇ ವಿಧವೆಯರಿಗೆ ಭಿನ್ನ
ಸಾಮಥ್ರ್ಯದವರಿಗೆ, ವಿಕಲಚೇತನರಿಗೆ ಸಹಾಯ ಹಸ್ತ ನೀಡಲಾಗುವುದು
ಎಂದು ಸಂಘದ ಪ್ರಕಟಣೆ ತಿಳಿಸಿದೆ.