ಆಳ್ವಾಸ್ ನುಡಿಸಿರಿ 2018 : ಸಮ್ಮೇಳನಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಆಳ್ವಾಸ್ ನುಡಿಸಿರಿ 2018 : ಸಮ್ಮೇಳನಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್

Share This
BUNTS NEWS, ಮಂಗಳೂರು: ಆಳ್ವಾಸ್ ನುಡಿಸಿರಿ 2018 ಸರ್ವಾಧ್ಯಕ್ಷರಾಗಿ ಡಾ.ಮಲ್ಲಿಕಾ ಎಸ್.ಘಂಟಿ ಹಾಗೂ ಉದ್ಘಾಟಕರಾಗಿ ಡಾ.ಷ.ಶೆಟ್ಟರ್ ಆಯ್ಕೆಯಾಗಿದ್ದಾರೆ.
ಡಾ. ಮಲ್ಲಿಕಾ ಎಸ್.ಘಂಟಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ’ವೆಂಬ ವಿಷಯಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಗಳಲ್ಲಿ ಪ್ರಾಧ್ಯಾಪಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಇವರು ಡೀನ್ ಆಗಿ, ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಆಡಳಿತಾನುಭವವನ್ನು ಪಡೆದುಕೊಂಡವರು. ಕನ್ನಡ ವಿಶ್ವವಿದ್ಯಾನಿಲಯ, ಹಂಪಿಯ ಕುಲಪತಿಗಳಾಗಿ 2015ರಲ್ಲಿ ಅಧಿಕಾರ ವಹಿಸಿಕೊಂಡ ಇವರು ಈಗ ಎರಡನೆಯ ಅವಧಿಗೆ ಕುಲಪತಿಗಳಾಗಿ ಮುಂದುವರಿದಿದ್ದಾರೆ.

ಪ್ರಾಧ್ಯಾಪಕಿ, ಸಾಹಿತಿ, ವಿಮರ್ಶಕಿ, ಸಂಶೋಧಕಿ, ಸಂಪಾದಕಿಯಾಗಿ ಬಹುಮುಖ ಪ್ರತಿಭೆಯ ಡಾ. ಮಲ್ಲಿಕಾ ಎಸ್. ಘಂಟಿಯವರು ಸಮರ್ಥ ಆಡಳಿತಗಾರರಾಗಿಯೂ ಸಂಘಟಕರಾಗಿಯೂ ಕನ್ನಡಪರ ಹೋರಾಟಗಾರರಾಗಿಯೂ ಹೆಸರುವಾಸಿಯಾದವರು. ‘ತುಳಿಯದಿರಿ ನನ್ನ’, ‘ ಹೆಣ್ಣುಗಳೆ ಹೀಗೆ’, ‘ರೊಟ್ಟಿ ಮತ್ತು ಹುಡುಗಿ’, ‘ಬೆಲ್ಲದಚ್ಚು ಇರುವೆದಂಡುಇವರ ಕವನ ಸಂಕಲನಗಳು. ‘ಚಾಜ’, ‘ಒಂದು ಬಾವಿಯ ಸುತ್ತಗಳೆಂಬ ನಾಟಕಗಳನ್ನು ರಚಿಸಿದ ಇವರುಅಹಲ್ಯಾ ಬಾಯಿ ಹೋಳ್ಕರ್’ ‘ಇಟಗಿ ಭೀಮಾಂಬಿಕೆ’ ‘ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ‘ಕನ್ನಡ ಕಥೆಗಾರ್ತಿಯರು’, ‘ತನು ಕರಗದವರಲ್ಲಿ’, ‘ಧರಣಿಯ ಮೇಲೊಂದು’, ‘ಭುವನಕ್ಕೆ ಬೆಲೆಯಿಲ್ಲ’, ‘ಒಳಗೆ ಸತ್ತು ಹೊರಗೆಗಳೆಂಬ ವಿಮರ್ಶಾಸಂಕಲನಗಳನ್ನು ಪ್ರಕಟಿಸಿದ್ದಾರೆ.

ಹಲವು ಕೃತಿಗಳನ್ನು ಸಂಪಾದಿಸಿದ ಇವರು ಸ್ತ್ರೀನಿಷ್ಠ ವಿಮರ್ಶಕಿಯಾಗಿಯೂ ಪ್ರಸಿದ್ಧರು. ಇವರ ಸಾಧನೆಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿನಿಧಿ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿಯೇ ಮೊದಲಾದ ಅಸಂಖ್ಯ ಪ್ರಶಸ್ತಿಗಳು ಸಂದಿವೆ. ಬಹುಮುಖ ಪ್ರತಿಭೆಯ ಡಾ.ಮಲ್ಲಿಕಾ ಎಸ್.ಘಂಟಿಯವರುಆಳ್ವಾಸ್ ನುಡಿಸಿರಿ-2018’ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯನ್ನೂ, ಸಂತೋಷವನ್ನೂ ಉಂಟು ಮಾಡಿದೆ.

ಆಳ್ವಾಸ್ ನುಡಿಸಿರಿ 2018 ಉದ್ಘಾಟಕ ಡಾ. .ಶೆಟ್ಟರ್ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ 5 ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಇಂಗ್ಲೇಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಇವರು ಪಡೆದಿದ್ದಾರೆ. ಭಾರತೀಯ ಪುರಾತತ್ತ್ವ, ಕಲೆ-ಇತಿಹಾಸ, ಸಮುದಾಯಗಳ ಇತಿಹಾಸ, ತತ್ತ್ವಶಾಸ್ತ್ರ ಮತ್ತು ಶಾಸ್ತ್ರೀಯ ಭಾಷೆಗಳ ಸಾಹಿತ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ಅಧ್ಯಯನ ನಿರತರು. ಅವರ ಅವಿರತ ಅಧ್ಯಯನದ ಫಲವಾಗಿ ಮೈಸೂರು ಅರ್ಕಿಯಾಲಜಿ, ಇಂಡಿಯನ್ ಅರ್ಕಿಯಾಲಜಿ, ಮೋನೋಗ್ರಾಫ್ಸ್ ಆನ್ ಹಿಸ್ಟರಿಯಾಗ್ರಫಿ, ವರ್ಲ್ಡ್ ಸಿವಿಲೈಜೇಶನ್, ಇಂಡಿಯನ್ ಆರ್ಟ್ ಹಿಸ್ಟರಿ, ಫಿಲಾಸಫಿಯೇ ಮೊದಲಾದ ವಿಷಯಗಳಲ್ಲಿ ಅಸಂಖ್ಯ ಕೃತಿಸಂಪುಟಗಳು ಪ್ರಕಟವಾಗಿವೆ

ಇತಿಹಾಸ ಮತ್ತು ಸಾಹಿತ್ಯಗಳಲ್ಲಿ ಸಮಾನ ಆಸಕ್ತಿಯನ್ನು ಹೊಂದಿರುವ ಶೆಟ್ಟರ್ ಚರಿತ್ರೆ ಮತ್ತು ಸಾಹಿತ್ಯ ಚರಿತ್ರೆಗಳನ್ನು ಮುರಿದು ಕಟ್ಟುವ ಕೆಲಸದಲ್ಲಿ ಅವಿಶ್ರಾಂತರಾಗಿ ನಿರತರು. ಭಾಷಾಶಾಸ್ತ್ರ, ಪ್ರಾಚೀನ ಕನ್ನಡದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ಸಿದ್ಧ ಪಾಶ್ಚಾತ್ಯ ಮಾದರಿಯ ಸಂಶೋಧನಾ ವಿಧಾನಗಳನ್ನು ಬದಿಗಿರಿಸಿ ಭಾವನಾತ್ಮಕ-ಕಾಲ್ಪನಿಕ ಕಥೆಗಳಲ್ಲಿ ಅಡಕವಾಗಿರಬಹುದಾದ ಚರಿತ್ರೆಯ ಸಂಗತಿಗಳನ್ನು ಹೆಕ್ಕಿ ತೆಗೆಯುವ ವಿಶಿಷ್ಟ ವಿಧಾನದ ಸಂಶೋಧನೆ ಅವರದು.

ಪ್ರಾಧ್ಯಾಪಕರಾಗಿ, ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಆರ್ಟ್ ಹಿಸ್ಟರಿಯ ನಿರ್ದೇಶಕರಾಗಿ, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ನವದೆಹಲಿಯ ಗೌರವಾಧ್ಯಕ್ಷರಾಗಿ, ಸೇವೆ ಸಲ್ಲಿಸಿದ ಪ್ರೊ..ಶೆಟ್ಟರ್ ಪ್ರಸ್ತುತ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಎಡ್ವಾನ್ಸ್ಡ್ ಸ್ಟಡೀಸ್ ಎಮಿರೆಟಸ್ ಫ್ರೊಫೆಸರ್ ಆಗಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್, ಬೆಂಗಳೂರು ಹಾಗೂ ಇಂದಿರಾ ಗಾಂಧಿ ನ್ಯಾಶನಲ್ ಸೆಂಟರ್ ಫಾರ್ ಆರ್ಟ್ಸ್, ಸೌತ್ ರೀಜನಿನ ಗೌರವ ನಿರ್ದೇಶಕರಾಗಿದ್ದಾರೆ. ಸಾಹಿತ್ಯ ಅಕಾಡೆಮಿಯ ಭಾಷಾಭೂಷಣ ಸಮ್ಮಾನ್, ಚಾವುಂಡರಾಯ ಪ್ರಶಸ್ತಿ, ಶಂಭಾ-ಜೋಶಿ ಪ್ರಶಸ್ತಿ, ಲಲಿತಕಲಾ ವಾರ್ಷಿಕ ಪ್ರಶಸ್ತಿ, ಆಚಾರ್ಯ ಕುಂದಕುಂದ ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Pages