ಇಂಧನ ಬೆಲೆ ಏರಿಕೆಯ ರಾಜಕೀಯ ಪ್ರೇರಿತ ಬಂದ್’ಗೆ ಜನತೆ ಬೆಂಬಲಿಸಬೇಡಿ: ಬಿಜೆಪಿ - BUNTS NEWS WORLD

ಇಂಧನ ಬೆಲೆ ಏರಿಕೆಯ ರಾಜಕೀಯ ಪ್ರೇರಿತ ಬಂದ್’ಗೆ ಜನತೆ ಬೆಂಬಲಿಸಬೇಡಿ: ಬಿಜೆಪಿ

Share This
ಮಂಗಳೂರು: ಇಂದನ ಬೆಲೆ ಜಾಗತಿಕ ಮಾರುಕಟ್ಟೆಯ ಆಧಾರದಲ್ಲಿ ಏರಿಳಿತ ಆಗುತ್ತಿರುವುದು ಸಾಮಾನ್ಯ ಜನರಿಗೂ ತಿಳಿದಿರುವ ವಿಚಾರ. ಇಂಧನದ ಬೆಲೆ ಏರಿಕೆ ಆದಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೆರಿಗೆ ಪ್ರಮಾಣವನ್ನು ಏರಿಕೆ ಮಾಡುವುದು ಸಾಮಾನ್ಯ ವಿಚಾರ. ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ರಾಜ್ಯದ ಕಾಂಗ್ರೇಸ್ ಜನತಾ ದಳ ಮೈತ್ರಿ ಸರಕಾರ ಇಂಧನ ಬೆಲೆಯಲ್ಲಿ ಕಳೆದ ಬಾರಿ 2 ರೂ. ಹೆಚ್ಚಿಸಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಸಂದರ್ಭದಲ್ಲಿ ಕಣ್ಣು ಮುಚ್ಚಿ ಕುಳಿತ ಕಾಂಗ್ರೇಸ್ ನಾಯಕರು ಲೋಕಸಭೆ ಚುನಾವಣಾ ದೃಷ್ಟಿಯಿಂದ ಸೋಮವಾರ ದಿನ ಬಂದ್ಗೆ ಕರೆ ಕೊಟ್ಟಿರುವುದು. ರಾಜಕೀಯ ಪ್ರೇರೀತ ಹಾಗೂ ದುರುದ್ದೇಶದ ಬಂದ್ ಕರೆ. ಕಾಂಗ್ರೇಸ್ ನೇತ್ರತ್ವದ 2013 UPA ಸರ್ಕಾರವಿದ್ದಾಗ ಇಂದನ ಬೆಲೆ ಏರಿಕೆ ಬಗ್ಗೆ ಕಾಂಗ್ರೇಸ್ ನಾಯಕರು ಮೌನ ಇದ್ದು ಈಗ ಓಆಂ ಸರಕಾರದ ಪಾರದರ್ಶಕ ಆಡಳಿತ ಇರುವ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆ ನೆಪದಲ್ಲಿ ಬಂದ್ಗೆ ಕರೆ ಕೊಟ್ಟಿರುವುದು ಯಾವ ನೈತಿಕತೆ ಆಧಾರದಲ್ಲಿ ಎಂಬುದು ಪ್ರಶ್ನಿಸಬೇಕಾಗಿದೆ.

ಇಂತಹ ದುರುದ್ದೇಶಪೂರಿತ ಬಂದ್ ಕರೆಯನ್ನು ಜಿಲ್ಲಾ ಬಿ.ಜೆ.ಪಿ ವಿರೋಧಿಸುತ್ತದೆ. ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಇಂತಹ ಬಂದ್ನ್ನು ಬೆಂಬಲಿಸಬಾರದಾಗಿ ಜಿಲ್ಲಾ ಬಿಜೆಪಿಯು ಪ್ರತಿಕಾ ಪ್ರಕಟಣೆಯಲ್ಲಿ ವಿನಂತಿಸಿದೆ.

Pages