ಅಶಕ್ತರಿಗೆ ವಿದ್ಯೆ ಕೊಡಿಸುವುದು ಬಂಟರ ಸಂಘದ ಜವಾಬ್ದಾರಿ : ನ್ಯಾ. ವಿಶ್ವನಾಥ ಶೆಟ್ಟಿ - BUNTS NEWS WORLD

ಅಶಕ್ತರಿಗೆ ವಿದ್ಯೆ ಕೊಡಿಸುವುದು ಬಂಟರ ಸಂಘದ ಜವಾಬ್ದಾರಿ : ನ್ಯಾ. ವಿಶ್ವನಾಥ ಶೆಟ್ಟಿ

Share This
BUNTS NEWS, ಉಡುಪಿ: ನಮ್ಮ ಸಮಾಜದ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹುರಿದುಂಬಿಸುವುದು ಹಿರಿಯರ ಕರ್ತವ್ಯವಾಗಿದೆ. ಸರಿಯಾದ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು, ಅದನ್ನು ಪಡೆಯಲು ಅಸಮರ್ಥರಾದವರಿಗೆ ನೀಡುವುಡು ಬಂಟರ ಸಂಘದ ಜವಾಬ್ದಾರಿಯಾಗಿದೆ ಎಂದು  ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು ಹೇಳಿದರು.
ಅವರು ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮಿಲನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮಲ್ಲಿ ತುಂಬಾನೇ ಡಾಕ್ಟರ್, ಇಂಜಿನಿಯರ್, ವಕೀಲರಿದ್ದಾರೆ. ಆದರೆ ಐಎಎಸ್, ಐಪಿಎಸ್ ಆದವರು, ಸರ್ಕಾರಿ ಸೇಮೆಯಲ್ಲಿರುವವರ ಸಂಖ್ಯೆ ಕಡಿಮೆಯಿದೆ. ಬಂಟ ಸಮಾಜವು ನಿಷ್ಠೆ, ದಕ್ಷತೆಗೆ ಹೆಸರುವಾಸಿಯಾದ ಸಮಾಜವಾಗಿದ್ದು ಒಳ್ಳೆಯ ಅಧಿಕಾರಿಯಾದರೆ ಸಮಾಜದ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬಲ್ಲರು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂಟರು ಐಎಎಸ್, ಐಪಿಎಸ್ ಹಾಗೂ ಸರ್ಕಾರಿ ಹುದ್ದೆಗಳಿಗೆ ಪ್ರಯತ್ನಿಸಬೇಕೆಂದರು.

Pages