ಬಲಿಷ್ಠವಾದ ಬಂಟ ಸಮಾಜ ಕಟ್ಟಬೇಕು : ನ್ಯಾ. ವಿಶ್ವನಾಥ ಶೆಟ್ಟಿ - BUNTS NEWS WORLD

ಬಲಿಷ್ಠವಾದ ಬಂಟ ಸಮಾಜ ಕಟ್ಟಬೇಕು : ನ್ಯಾ. ವಿಶ್ವನಾಥ ಶೆಟ್ಟಿ

Share This
BUNTS NEWS, ಉಡುಪಿ: ವಿದ್ಯೆಯಲ್ಲಿ ಬಂಟರು ಮುಂದೆ ಬರಬೇಕು, ಬಂಟ ಸಮಾಜವನ್ನು ಬಲಿಷ್ಟವಾಗಿ ಕಟ್ಟಬೇಕೆಂದು ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು ಹೇಳಿದರು.
ಅವರು ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮಿಲನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಬಂಟರ ಸಂಘವು ಆರೋಗ್ಯ ತೊಂದರೆ ಇರುವವರಿಗೆ ನೆರವು ನೀಡಬೇಕು, ಆರ್ಥಿಕವಾಗಿ ಸಬಲರಾದವರು ಉದ್ದಿಮೆ ಸ್ಥಾಪಿಸಿ ಉದ್ಯೋಗ ಸೃಷ್ಠಿಸಬಹುದು. ಇದರಿಂದ ಸಮಾಜಕ್ಕೆ ಸಹಾಯವಾಗುತ್ತದೆ ಎಂದರು.

ಕರ್ನಿರೆ ವಿಶ್ವನಾಥ ಶೆಟ್ಟಿ ಅವರು 1 ಎಕ್ರೆ ಭೂಮಿಯನ್ನು ಬಡವರಿಗಾಗಿ ದಾನ ಮಾಡಿರೋದು ಸಂತೋಷದ ವಿಷಯವಾಗಿದೆ. ಪರಸ್ಪರ ಸಹಾಯ, ಸಹಕಾರದಿಂದ ಸುಂದರವಾದ ಸಮಾಜ ನಿರ್ಮಾಣ ಮಾಡಬಹುದು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Pages