ಶಿಕ್ಷಣದ ಮೂಲಕ ಶಿಸ್ತು-ಸಂಸ್ಕಾರವನ್ನು ಪಡೆಯಿರಿ: ತೇಜಸ್ವಿನಿ ಗೌಡ - BUNTS NEWS WORLD

ಶಿಕ್ಷಣದ ಮೂಲಕ ಶಿಸ್ತು-ಸಂಸ್ಕಾರವನ್ನು ಪಡೆಯಿರಿ: ತೇಜಸ್ವಿನಿ ಗೌಡ

Share This
ಮಂಗಳೂರು: ವಿದ್ಯಾರ್ಥಿಗಳು ಯಾರ ಒತ್ತಡಕ್ಕೂ ಮಣಿಯದೆ ತಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಬೇಕು. ದೇಶಕ್ಕೆ ಒಳ್ಳೆಯ ನಾಗರಿಕನಾಗಿ, ಉತ್ತಮ ಪ್ರಜೆಯಾಗಿ ಬದುಕಬೇಕು. ದೇಶ ಮೊದಲು ಎಂಬುವುದು ನಾವೆಲ್ಲ ತಿಳಿಯಬೇಕು. ಮೂಲಕ ಶಿಸ್ತು ಹಾಗೂ ಸಂಸ್ಕಾರವನ್ನು ರೂಡಿಸಬೇಕೆಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಕರೆ ನೀಡಿದರು.
ಅವರು ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಸೈನ್ಯಾಧಿಕಾರಿ, ಉತ್ತಮ ವಕೀಲ, ಉತ್ತಮ ವೈದ್ಯ ಹಾಗೂ ಉತ್ತಮ ಇಂಜಿನಿಯರ್ ಆಗುವ ಕನಸು ಹೊತ್ತು ಓದಬೇಕು. ಮೂಲಕ ಸಮಾಜದ ಋಣ ತೀರಿಸಬೇಕೆಂದು ಹೇಳಿದರು.

ಸಂದರ್ಭ ಸಂಸ್ಥೆಯ ಸ್ಥಾಪಕ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮೊಕ್ತೇಸರ ಕೆ. ಸಿ ನಾೈಕ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪೂ ಕಾಲೇಜು ಪ್ರಾಚಾರ್ಯ ಪ್ರಭಾಕರ ಜಿ.ಎಸ್, ಸಂಸ್ಥೆ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಮಾಜಿ ಟ್ರಸ್ಟಿ ಕಿಶೋರ ಶಿರಾಡಿ, ಬಿಜೆಪಿ ರಾಜ್ಯ ಸಹ ವಕ್ತಾರ ಮಹೇಶ ತುಪ್ಪೆಗಲ್ಲ ಕಾವೂರು ಕೊ-ಓಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಲೋಕೇಶ್ ಭಂಡಾರಿ ಉಪಸ್ಥಿತರಿದ್ದರು ಶಕ್ತಿ ವಸತಿ ಶಾಲೆ ಪ್ರಾಚಾರ್ಯರಾದ ಮಧುಲಿಕಾ ರಾವ್ ಸ್ವಾಗತಿಸಿದರು.

Pages