ಮಂಗಳೂರು : ಕದ್ರಿ ಕ್ರಿಕೆಟರ್ಸ್ ಕ್ಲಬ್
(ರಿ) ಇದರ ಆಶ್ರಯದಲ್ಲಿ ರಿದಮಿಕ್
ನೈಟ್ ಕಾರ್ಯಕ್ರಮವು ಕದ್ರಿ ಮೈದಾನದಲ್ಲಿ ಜರಗಿತು.
ಸಮಾರಂಭದಲ್ಲಿ
ಜಿಲ್ಲಾ ಉಸ್ತುವಾರಿ
ಸಚಿವ ಯು.ಟಿ ಖಾದರ್,
ಸಂಸದ ನಳಿನ್ ಕುಮಾರ್ ಕಟೀಲ್,
ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಭಾಸ್ಕರ್
ಕೆ, ಶಾಸಕ ಡಾ. ವೈ
ಭರತ್ ಶೆಟ್ಟಿ , ಎ.ಜೆ ಶೆಟ್ಟಿ,
ಲಕ್ಷ್ಮೀಶ ಭಂಡಾರಿ, ದಿನೇಶ್ ದೇವಾಡಿಗ
ಕದ್ರಿ, ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ
ಪೂಜಾರಿ, ವಿಧಾನ ಪರಿಷತ್ ಸದಸ್ಯ
ಹರೀಶ್ ಕುಮಾರ್ ಮೊದಲಾದವರು ಮುಖ್ಯ
ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ
ತುಳು ನಾಟಕ ಕಲಾವಿದರ ಒಕ್ಕೂಟದ
ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ
ಮತ್ತು ಯೋಧ ಪ್ರವೀಣ್ ಶೆಟ್ಟಿ
ಅವರನ್ನು ಸನ್ಮಾನಿಸಲಾಯಿತು. ಕಾರ್ಪೋರೇಟರ್ ಡಿ.ಕೆ ಅಶೋಕ್
ಕುಮಾರ್, ಮೋಹನ್ ಕೊಪ್ಪಲ ಕದ್ರಿ,
ರತ್ನಾಕರ ಜೈನ್, ಗೋಕುಲ್ ಕದ್ರಿ,
ಮಾಜಿ ಮೇಯರ್ ಶಶಿಧರ ಹೆಗ್ಡೆ
, ಅಮೃತ ವಿ. ಕದ್ರಿ, ಅಕ್ಷಿತ್
ಸುವರ್ಣ , ಕಿರಣ್ ಜೋಗಿ , ಧನರಾಜ್
, ಗೌರವ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ
ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ,
ಸಾಧು ಕೋಕಿಲ, ರಘು ದೀಕ್ಷಿತ್,
ಅಜಯ ವಾರಿಯರ್, ಅಂಕಿತಾ ಕುಂದು, ನವ್ಯಾ
ಜೈತಿ ಭಾಗವಹಿಸಿ ಕಾರ್ಯಕ್ರಮಕ್ಕೆ ತಾರಾಮೆರುಗು ನೀಡಿದರು. ಶಾಹಿಲ್ ರೈ ಮತ್ತು
ಮಧು ಮೈಲಾನ್ ಕೊಡಿ ಕಾರ್ಯಕ್ರಮ
ನಿರ್ವಹಿಸಿದರು. ಅಗ್ನಿ ಗ್ರೂಪ್ ಬೆಂಗಳೂರು,
ರೆವೆಲೇಷನ್ ಡ್ಯಾನ್ಸ್ ಅಕಾಡೆಮಿ ಮತ್ತು ಟೀಮ್
ಡಿಫರೆಂಟ್ ತಂಡಗಳಿಂದ ನೃತ್ಯ
ಸ್ಪರ್ಧೆ ಜರಗಿತು.