BUNTS NEWS, ಮಂಗಳೂರು: ತುಳು ಸಿನಿಮಾರಂಗದಲ್ಲಿ ಕೆಲ ಹಿತಾಸಕ್ತಿಗಳಿದ್ದು
ಚಿತ್ರ ಬಿಡುಗಡೆಗೆ ಅವರಿಷ್ಟದ ತಿಂಗಳುಗಳೇ ಬೇಕು. ಈ ಸಂದರ್ಭ ಬೇರೆಯವರ ಚಿತ್ರ ಬಿಡುಗಡೆಯಾಗಬಾರದೆಂಬ
ಧೋರಣೆಯಿರುವುದಾಗಿ ಚಿತ್ರ ನಿರ್ಮಾಪಕ ರವಿ ರೈ ಕಳಸ ಆರೋಪಿಸಿದ್ದಾರೆ.
ಅವರು ಬುಧವಾರ “ಮೈ
ನೇಮ್ ಇಸ್ ಅಣ್ಣಪ್ಪ” ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಳು ಸಿನಿಮಾರಂಗದಲ್ಲಿನ ವ್ಯವಸ್ಥೆಗಳನ್ನು
ಮುಕ್ತವಾಗಿ ಹೇಳಲೇಬೇಕಾಗಿದೆ. ತುಳು ಸಿನಿಮಾರಂಗದಲ್ಲಿ ಹಲವಾರು ಸಮಸ್ಯೆಗಳಿದ್ದು ಸಿನಿಮಾ ನಿರ್ಮಾಣಕ್ಕೆ
ನಿರ್ಮಾಪಕರು ಬರುವುದು ತುಂಬಾನೇ ಕಷ್ಟವಾಗಿದೆ. ಕೆಲ ಹಿತಾಸಕ್ತಿಗಳು ತಮ್ಮಿಷ್ಟ ಬಂದತೆ ಸಿನಿಮಾರಂಗದಲ್ಲಿ
ಪ್ರಭಾವಬೀರುತ್ತಿರುವುದು ಇದಕ್ಕೆಲ್ಲ ಕಾರಣವೆಂದರು.
ಅಣ್ಣಪ್ಪ ಸಿನಿಮಾ ಮೊದಲು
ಸೆನ್ಸಾರ್’ಗೆ ಅರ್ಜಿ ಹಾಕಿದ್ದು ಮೊದಲು ಸೆನ್ಸಾರ್
ಸರ್ಟಿಫಿಕೇಟ್ ಪಡೆದುಕೊಂಡಿದೆ. ಆದರೆ ಸಿರಿಯಲ್ ನಂಬರಿನಲ್ಲಿ ವ್ಯತ್ಯಾಸವಾಗಿದ್ದು ತುಳು ಚಲನಚಿತ್ರ
ನಿರ್ಮಾಪಕರ ಸಂಘದ ಸ್ಕ್ರೀನಿಂಗ್ ಕಮಿಟಿಯಲ್ಲಿ ಸಿರಿಯಲ್ ನಂಬರ್’ಗೆ ಮೊದಲ ಆದ್ಯತೆ ಎಂಬುದಾಗಿ ಎಲ್ಲೂ
ಇಲ್ಲವೆಂದು ಸ್ಪಷ್ಠೀಕರಣ ನೀಡಿದರು.
ಮಂಗಳೂರಿನಲ್ಲಿ ತುಳು
ಸಿನಿಮಾಗಳಿಗೆ ಹೆಚ್ಚು ಚಿತ್ರಮಂದಿರ ದೊರೆಯುವಂತೆ ತುಳು ಚಲನಚಿತ್ರ ನಿರ್ಮಾಪಕರ ಸಂಘ ಮಾಡಬೇಕಾಗಿದೆ.
ಈಗಾಗಲೇ ತುಳು ಸಿನಿಮಾಗಳಿಗೆ ಚಿತ್ರಮಂದಿರದ ಕೊರತೆ ಎದುರಿಸುತ್ತಿದ್ದು ಅವನ್ನು ತುಳು ಸಿನಿಮಾ ಹಿತದೃಷ್ಠಿಯಿಂದ
ಬಗೆಹರಿಸಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ
ಲಕುಮಿ ಸಿನಿಕ್ರಿಯೇಶನ್ಸ್’ನ ಲಯನ್ ಕಿಶೋರ್ ಡಿ ಶೆಟ್ಟಿ, ನಟರಾದ ಮಂಜು ರೈ ಮೂಳಾರು, ಅರವಿಂದ ಬೋಳಾರ್,
ಮೋಹನ್ ಕೊಪ್ಪಳ, ಸಾಯಿ ಕೃಷ್ಣ, ಪ್ರದೀಪ್ ಆಳ್ವ ಮತ್ತಿತರ ಪ್ರಮುಖರು ಇದ್ದರು.