BUNTS NEWS, ಸುರತ್ಕಲ್ : ಇತ್ತೀಚೆಗೆ ಹೈದರಾಬಾದ್ನಲ್ಲಿ ಜರಗಿದ 36ನೇ
ಬುಡಾಕಾನ್ ಕರಾಟೆ ಭಾರತ ರಾಷ್ಟ್ರೀಯ
ಮಟ್ಟದ ಚಾಂಪಿಯನ್ಶಿಪ್ 2018ರ 10 ರಿಂದ
12 ವರ್ಷದ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಮತ್ತು
30-35 ಕೆ.ಜಿ.ಯವರೆಗಿನ ವೈಯಕ್ತಿಕ
‘’ಕಮಿಟಿ’ ವಿಭಾಗದಲ್ಲಿ ಕಂಚಿನ ಪದಕವನ್ನು ಶಿಖಾ
ಶೆಟ್ಟಿ 62ನೇ ತೋಕೂರು ಪಡೆದಿರುತ್ತಾರೆ.
ಇವರು
62ನೇ ತೋಕೂರು ದಾಮೋದರ ಶೆಟ್ಟಿ
ಮತ್ತು ಭವ್ಯಾ ಶೆಟ್ಟಿಯ ಪುತ್ರಿ
ಹಾಗೂ ಮಂಜನಾಡಿ ಕಟ್ಟೆಮಾರುಗುತ್ತು ದೇವಪ್ಪ
ಆಳ್ವರ ಮೊಮ್ಮಗಳು. ಈಕೆ ಕರಾಟೆ ತರಬೇತಿಯ
ಮುಖ್ಯ ಶಿಕ್ಷಕರಾದ ಶಿಹಾನ್ ದಿನೇಶ್ ಆಚಾರ್ಯ
ಹಳೆಯಂಗಡಿ ಇವರಿಂದ ತರಬೇತಿ ಪಡೆದಿದ್ದಾಳೆ.