ಭಕ್ತಿ ಸಡಗರದಿಂದ ಜರಗಿದ ಅಜ್ಮಾನ್ ಸಾರ್ವಜನಿಕ ಗಣೇಶೋತ್ಸವ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517ಭಕ್ತಿ ಸಡಗರದಿಂದ ಜರಗಿದ ಅಜ್ಮಾನ್ ಸಾರ್ವಜನಿಕ ಗಣೇಶೋತ್ಸವ

Share This
ದುಬಾಯಿ: ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಸಮಿತಿ ದುಬಾಯಿ ಇದರ 4 ನೇ ವರ್ಷದ ಶ್ರೀ ಗಣೇಶೋತ್ಸವ ಸೆ.14 ರಂದು ಅಜ್ಮಾನ್ ಯೂತ್ ಸೆಂಟರ್’ನಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಸಡಗರದಿಂದ ಯಶಸ್ವಿಯಾಗಿ ಜರಗಿತು.
ಮುಂಜಾನೆ ಗಣೇಶ ವಿಗ್ರಹ ಪ್ರತಿಷ್ಠಾಪನೆಗೊಂಡು ನಂತರ ದುಬಾಯಿಯ ವಿವಿಧ ಭಜನಾ ಸಂಘ ಸಂಸ್ಥೆಗಳ ತಂಡದವರಿಂದ ಭಜನಾ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ಅನ್ನದಾನ ಜರಗಿತು.

ಭಕ್ತಿ ರಸಮಂಜರಿ ಹಾಗೂ ಸಭಾಕಾರ್ಯಕ್ರಮ: ಮಧ್ಯಾಹ್ನದ ಮೇಲೆ ಸಾಯಿ ಮಲ್ಲಿಕ ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಿತು.ನಂತರ ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರಾಜೇಶ್ ರಾವ್ ರವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ಜರಗಿತು. ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೃಷ್ಣ.ಜೆ ಪಾಲೇಮಾರ್, ಜೆ.ಕೆ ರಾವ್, ಮಾರ್ಗದೀಪ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಪ್ರಭಾಕರ್ ಅಂಬಲ್ತಾರೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. 
ಕಾರ್ಯಕ್ರಮದ ನಿರೂಪನೆಯನ್ನು ಸುಗಂದ್ ರಾಜ್ ಬೇಕಲ್ ನಿರ್ವಹಿಸಿದರು. ಕಾರ್ಯದರ್ಶಿ ಅಜಿತ್ ಬೇಕಲ್ ಧನ್ಯವಾದವಿತ್ತರು. ಸಾಯಂಕಾಲ 5.00 ಗಂಟೆಗೆ ಶ್ರೀ ಗಣೇಶನ ಮೆರವಣಿಗೆಯೊಂದಿಗೆ ವಿಸರ್ಜನೆ ಜರಗಿತು. [ಮಾಹಿತಿ ಕೃಪೆ: ವಿಜಯ್ ಕುಮಾರ್ ಶೆಟ್ಟಿ ಮಜಿಬೈಲು – UAE]

Pages