ಮಂಗಳೂರು: ತುಳು ಸಿನಿ ನಿರ್ಮಾಪಕರ ಸಂಘವು ನಮ್ಮಲ್ಲಿ ಮನವಿ ಮಾಡಿದಷ್ಟು ಅವರಿಗೆ ಮಾಡಿಲ್ಲ.
ಅವರಲ್ಲಿ ಕೇಳಿದ್ರೆ ಮೇಜು ಬಡಿದು ಅದೇ ದಿನ ಬೇಕೂಂತ ಹೇಳ್ತಾರೆ. ಅವರಿಗೆ ಅಷ್ಟೊಂದು ಹಠವಿರುವಾಗ ನಾವು
ಎನೂಂತ ಅವ್ರಿಗೂ ಗೊತ್ತಾಗಬೇಕೆಂದು ಲಕುಮಿ ಸಿನಿಕ್ರಿಯೇಶನ್ಸ್’ನ ಲಯನ್ ಕಿಶೋರ್ ಡಿ ಶೆಟ್ಟಿ ಅವರು
ಹೇಳಿದ್ದಾರೆ.
ಅವರು ಬುಧವಾರ “ಮೈ
ನೇಮ್ ಇಸ್ ಅಣ್ಣಪ್ಪ” ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಒಂದೇ ದಿನ ಎರಡೆರಡು ತುಳು ಸಿನಿಮಾ ಬಿಡುಗಡೆಗೊಳ್ಳುತ್ತಿರುವ
ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಇಲ್ಲಿಯರವರೆಗೆ 4 ಸಿನಿಮಾ ಅವರು ನಿರ್ಮಿಸಿದ್ದು
ಪ್ರತಿಯೊಂದನ್ನು ಸಪ್ಟೆಂಬರ್, ಅಕ್ಟೋಬರ್, ನವಂಬರ್ ತಿಂಗಳಲ್ಲೇ ಬಿಡುಗಡೆಗೊಳಿಸಿದ್ದಾರೆ. ಈ ಅವಧಿಯಲ್ಲಿ
ಬೇರ್ಯಾರೂ ಸಿನಿಮಾ ಬಿಡುಗಡೆ ಮಾಡಬಾರದೆಂಬ ಧೋರಣೆಯು ಆನೆ ಬರುವಾಗ ಬದಿಗೆ ನಿಲ್ಲಿ ಎಂಬಂತಿದೆ ಎಂದು
ಬೇಸರ ವ್ಯಕ್ತಪಡಿಸಿದರು.
ಇಂತಹ ಧೋರಣೆಯನ್ನು
ಯಾರೂ ಒಪ್ಪಲು ತಯಾರಿಲ್ಲ. ಕೆಲ ಸಿನಿಮಾದವರು ಹೆದರಿ ತಮ್ಮ ಸಿನಿಮಾವನ್ನು ಸೆನ್ಸಾರ್’ಗೆ ಕಳಿಸಲು ಭಯಪಡುತ್ತಿದ್ದಾರೆ.
ನಾವು ಅವರಿಗೆ ಎದುರು ಹೋಗುತ್ತಿಲ್ಲ. ಬದಲಾಗಿ ಆರೋಗ್ಯಕರ ಸ್ಪರ್ಧೆ ನೀಡುತ್ತಿದ್ದೇವೆ ಹೊರತು ಯಾವುದೇ
ಭಿನ್ನಾಬಿಪ್ರಾಯವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ
ನಿರ್ಮಾಪಕ ರವಿ ರೈ ಕಳಸ, ನಟರಾದ ಮಂಜು ರೈ ಮೂಳಾರು,
ಅರವಿಂದ ಬೋಳಾರ್, ಮೋಹನ್ ಕೊಪ್ಪಳ, ಸಾಯಿ ಕೃಷ್ಣ, ಪ್ರದೀಪ್ ಆಳ್ವ ಮತ್ತಿತರ ಪ್ರಮುಖರು ಇದ್ದರು.
“ಮೈ ನೇಮ್ ಈಸ್ ಅಣ್ಣಪ್ಪ”
ಸಿನಿಮಾ ಇದೇ ಸೆ.21ರಂದು ಜ್ಯೋತಿ ಚಿತ್ರಮಂದಿರದಲ್ಲಿ ತೆರೆಕಾಣಲಿದೆ.