BUNTS NEWS, ಬೆಂಗಳೂರು: ಜಾಗತಿಕ ಬಂಟರ ಸಂಘಗಳ
ಒಕ್ಕೂಟ ಹಾಗೂ ಸಮಸ್ತ ಬಂಟರ
ಸಂಘಗಳು ಉಡುಪಿ ಜಿಲ್ಲೆ ಇವರ
ಕೂಡುವಿಕೆಯೊಂದಿಗೆ ಇದೇ ಬರುವ ಸೆ.9ರಂದು ಉಡುಪಿಯಲ್ಲಿ ಜರಗಲಿರುವ
ವಿಶ್ವ ಬಂಟರ ಸಮ್ಮಿಲನ 2018ರ
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಬಂಟರ ಸಂಘ ಬೆಂಗಳೂರಿನಲ್ಲಿ ನಡೆಯಿತು.
ವಿಶ್ವ ಬಂಟರ ಸಮ್ಮಿಲನ
2018ರ ಆಮಂತ್ರಣ ಪತ್ರಿಕೆಯನ್ನು ಎಂಆರ್
ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ
ಕೆ.ಪ್ರಕಾಶ್ ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ
ಐಕಳ ಹರೀಶ್ ಶೆಟ್ಟಿ ವಹಿಸಿದ್ದರು.
ಈ ಈ ಸಂದರ್ಭ ಒಕ್ಕೂಟದ
ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ
,ಸಮ್ಮಿಲನದ ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ
ಉಳ್ತೂರು, ಬೆಂಗಳೂರು ಬಂಟರ ಸಂಘದ ನೂತನ
ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ
ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕರ್ನೂರು
ಮೋಹನ್ ರೈ ಹಾಗೂ ಬೆಂಗಳೂರು
ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು
ಉಪಸ್ಥಿತರಿದ್ದು ಸಮ್ಮಿಲನದ ಯಶಸ್ಸಿಗೆ ಶುಭ ಹಾರೈಸಿದರು. ಸುದ್ದಿ: ದಿನೇಶ್
ಕುಲಾಲ್