ಸರಕಾರಿ ಶಾಲೆಗಳಿಂದ ಸಾಮರಸ್ಯದ ಸಂದೇಶ: ಎಂ. ಸುರೇಶ್ಚಂದ್ರ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸರಕಾರಿ ಶಾಲೆಗಳಿಂದ ಸಾಮರಸ್ಯದ ಸಂದೇಶ: ಎಂ. ಸುರೇಶ್ಚಂದ್ರ ಶೆಟ್ಟಿ

Share This
ಮಂಗಳೂರು: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುಗಡೆಯಾಗುವ ಮುನ್ಸೂಚನೆ ಕೇಳಿಬರುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಕಲಾಸಂಘಟನೆಗಳು, ಚಲನಚಿತ್ರರಂಗದವರು ವಿವಿಧ ಪ್ರಕಾರಗಳ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಮತ್ತು ಸಿನಿಮಾಗಳ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಮಕ್ಕಳಿಂದಲೇ ಪ್ರದರ್ಶಿಸುವ ಮೂಲಕ ತಮ್ಮ ಕೊಡುಗೆಯನ್ನು ನೀಡುತ್ತಿರುವುದು ಅಭಿನಂದನೀಯ ಎಂದು ಹಿಂದ್ ಮಜ್ದೂರ್ ಸಭಾ ಕರ್ನಾಟಕ ಘಟಕದ ಅಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿಯವರು ನುಡಿದರು.
ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ರಂಗಸ್ಪಂದನ (ರಿ) ಮಂಗಳೂರು ..ಜಿ..ಹಿ.ಪ್ರಾ ಶಾಲೆ ಮಣ್ಣಗುಡ್ಡ, ಮಂಗಳೂರು ಇಲ್ಲಿ ಹಮ್ಮಿಕೊಂಡ `ಮುಂಗಾರು ರಂಗಸುಗ್ಗಿ' ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ಸ್ವರ್ಣ ಉದ್ಯಮಿ ಎಸ್.ಎಲ್. ಶೇಟ್ ಜ್ಯುವೆಲ್ಲರ್ಸ್ ಮತ್ತು ಡೈಮಂಡ್ ಹೌಸ್ ಅಡಳಿತ ಪಾಲುದಾರರಾದ ಪದ್ಮಾ ಆರ್. ಶೇಟ್ ಅವರು ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಮೀರಾ ಎಂ.ವಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಬಾನ ಬಾನು ಉಪಸ್ಥಿತರಿದ್ದರು. ರಂಗಸ್ಪಂದನದ ಸಂಚಾಲಕ ರಂಗಕರ್ಮಿ ವಿ.ಜಿ.ಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಶಶಿಕಲಾ ಬಿ.ಕೆ. ಕಾರ್ಯಕ್ರಮ ನಿರೂಪಿಸಿ, ಗೀತಾ ಕುಮಾರಿ ಸ್ವಾಗತಿಸಿದರು. ಪುಷ್ಪಲತಾ ವಂದನಾರ್ಪಣೆಗೈದರು. ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಪದ್ಮಾ ಆರ್. ಶೇಟ್ರವರನ್ನು ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕೋಸ್ಟಲ್ ರೌಂಡ್ಸ್ ನಿಶಾಂತ್ ಆರ್. ಶೇಟ್, ಹಳೆ ವಿದ್ಯಾರ್ಥಿ ಸಂಘದ ಪ್ರ. ಕಾರ್ಯದರ್ಶಿ ರಾಜೇಶ್ ಶೆಟ್ಟಿ, ರಂಗಸ್ಪಂದನದ ಧನಂಜಯ ಪುತ್ರನ್ ಬೆಂಗ್ರೆ, ಸುರೇಶ್ ಬಾಬು ಬೊಕ್ಕಪಟ್ಣ, ಕುಡ್ಲ ತುಳು ಕೂಟದ ಜೆ.ವಿ. ಶೆಟ್ಟಿ ಉಪಸ್ಥಿತರಿದ್ದರು.

ಸಾಂಸ್ಕøತಿಕ ಸಂಭ್ರಮದ ಶಿಕ್ಷಕಿಯರಾದ ವನಿತಾ ಶೆಟ್ಟಿ, ವನಿತಾ ಆಳ್ವರವರ ನಿರ್ದೇಶನದಲ್ಲಿ, ಸಂಗೀತ ನಿರ್ದೇಶಕ ಮುರಳೀಧರ್ ಕಾಮತ್ ಹಾಗೂ ಹಿನ್ನೆಲೆ ಗಾಯಕಿ ಮಂಜುಳಾ ಶೆಟ್ಟಿ ಸಾರಥ್ಯದಲ್ಲಿ ಶಾಲಾ ಮಕ್ಕಳಿಂದ `ಕುಣಿಯೋಣ-ಹಾಡೋಣ ಬನ್ನಿ' ಸಂಗೀತ ಗಂಗೆ ಪ್ರದರ್ಶಿಸಲ್ಪಟ್ಟಿತು.

Pages